HomePage_Banner_
HomePage_Banner_

ಬಳಂಜ: ಕ್ಯಾಂಪಸ್ ವಾರಿಯರ್‍ಸ್‌ನಿಂದ ವಾಲಿಬಾಲ್ ಪಂದ್ಯಾಟ

ಬಳಂಜ: ಬಳಂಜ ವಾಲಿಬಾಲ್ ಕ್ಲಬ್ ಇದರ ಆಶ್ರಯದಲ್ಲಿ ಸಚಿನ್ ಶೆಟ್ಟಿ ಮಾಲಕತ್ವದ ಕ್ಯಾಂಪಸ್ ವಾರಿಯರ್‍ಸ್ ತಂಡದ ವತಿಯಿಂದ ಬಿ.ವಿ.ಎಲ್ ಸೀಸನ್ 3 ಕ್ಯಾಂಪಸ್ ವಾರಿಯರ್‍ಸ್ ಟ್ರೋಫಿ 2020 ವಾಲಿಬಾಲ್ ಪಂದ್ಯಾಟ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಬಿ.ವಿ.ಎಲ್ ಅಧ್ಯಕ್ಷ ರಾಕೇಶ್ ಹೆಗ್ಡೆ ನೇರವೇರಿಸಿ ಶುಭ ಹಾರೈಸಿದರು.


ವೇದಿಕೆಯಲ್ಲಿ ಕೋಟ್ಯಾನ್ ರಾಕರ್‍ಸ್ ತಂಡದ ಮಾಲಕ ಸಂತೋಷ್ ಪಿ ಕೋಟ್ಯಾನ್ ಬಳಂಜ, ಸುವರ್ಣ ಸ್ಟೈಕರ್‍ಸ್ ತಂಡದ ಮಾಲಕ ರಂಜಿತ್ ಹೆಚ್.ಡಿ, ಮಜ್ಜೆನಿಬೈಲು ಬ್ರದರ್‍ಸ್ ತಂಡದ ಮಾಲಕ ವಿಶ್ವನಾಥ ಹೊಳ್ಳ, ಧಿಮಿಸೋಲೆ ತಂಡದ ವ್ಯವಸ್ಥಾಪಕ ಯಶೋಧರ ಶೆಟ್ಟಿ, ಕಾರ್ಯದರ್ಶಿ ಯೋಗೀಶ್ ಯೈಕುರಿ, ಕಮಿಟಿ ಸದಸ್ಯರಾದ ಲತೇಶ್ ಪೆರಾಜೆ, ಯೋಗೀಶ್ ಕೊಂಗುಲ, ಪ್ರಕಾಶ್ ಶೆಟ್ಟಿ, ಜೀವನ್ ಶೆಟ್ಟಿ, ಅಳದಂಗಡಿ ಸಿ.ಎ ಬ್ಯಾಂಕ್ ನಿರ್ದೇಶಕ ಗುರುಪ್ರಸಾದ್ ಹೆಗ್ಡೆ, ಹಾಗೂ ಕ್ಯಾಂಪಸ್ ವಾರಿಯರ್‍ಸ್ ತಂಡದ ಆಟಗಾರರು, ಬಿ.ವಿ.ಎಲ್ ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬೇರೆ ಊರಿಗೆ ತೆರಳಲಿರುವ ಬಿ.ವಿ.ಎಲ್ ಸದಸ್ಯ ಜಾನ್ ಅವರನ್ನು ಸಮಿತಿ ವತಿಯಿಂದ ಗೌರವಿಸಲಾಯಿತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.