HomePage_Banner_
HomePage_Banner_

ಬೆಳ್ತಂಗಡಿ ತಾಲೂಕು ಯುವ ಬಿಲ್ಲವ ವೇದಿಕೆಯಿಂದ ವೈದ್ಯಕೀಯ ನೆರವು

ಬೆಳ್ತಂಗಡಿ: ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಸಂಸ್ಥೆಯ ಅಂಗಸಂಸ್ಥೆಯಾದ ತಾಲೂಕು ಯುವ ಬಿಲ್ಲವ ವೇದಿಕೆಯ ಪ್ರಥಮ ಸೇವಾ ಯೋಜನೆಯಿಂದ ಮೆದುಳು ಜ್ವರದಿಂದ ಬಳಲುತ್ತಿರುವ ಶಿರ್ಲಾಲು ಗ್ರಾಮದ ರಮೇಶ್ ಪೂಜಾರಿಯವರ ವೈದ್ಯಕೀಯ ಚಿಕಿತ್ಸೆಗೆ ರೂ.7ಸಾವಿರವನ್ನು ಯುವ ಬಿಲ್ಲವ ವೇದಿಕೆ ಅಧ್ಯಕ್ಷ ರಂಜಿತ್ ಹೆಚ್ ಡಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಕೋಶಾಧಿಕಾರಿ ಚಿದಾನಂದ ಪೂಜಾರಿ ಎಲ್ದಕ್ಕ, ಶಿರ್ಲಾಲು ಗ್ರಾಮ ಸಮಿತಿ ಅಧ್ಯಕ್ಷ ವಿಶ್ವನಾಥ ಸಾಲಿಯಾನ್ ಪುದ್ದರಬೈಲು, ಯುವಬಿಲ್ಲವ ವೇದಿಕೆ ಉಪಾಧ್ಯಕ್ಷ ಪುನೀತ್ ಕುಮಾರ್ ಮಡಂತ್ಯಾರು, ಕೋಶಾಧಿಕಾರಿ ಹರೀಶ್ ಕಲ್ಲಾಜೆ, ಸಂಘಟನಾ ಕಾರ್ಯದರ್ಶಿಗಳಾದ ಚಂದ್ರಶೇಖರ್ ಮಚ್ಚಿನ, ಪ್ರವೀಣ್ ಕೋಟ್ಯಾನ್ ಶಿರ್ಲಾಲು, ಸದಸ್ಯ ಜಗದೀಶ್ ಬಳಂಜ ಹಾಗೂ ಶಿರ್ಲಾಲು ಗ್ರಾಮ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.