ಮಿತ್ತಬಾಗಿಲು: ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜನ್ ಜಿ.ಗೌಡ ರವರ ಅಧ್ಯಕ್ಷತೆಯಲ್ಲಿ ಅ.16ರಂದು ಮಿತ್ತಬಾಗಿಲು ಗ್ರಾಮದ ಬೂತ್ ನಂ 18ರ ಬೂತ್ ಸಮಿತಿ ಸಭೆಯು ಶರೀಫ್ ಕಾಜೂರ್ ರವರ ಮನೆಯಲ್ಲಿ ನಡೆಯಿತು.
ಈ ಸಂದರ್ಭ ಗ್ರಾಮ ಸಮಿತಿಯನ್ನು ರಚಿಸಲಾಗಿದ್ದು ಅಧ್ಯಕ್ಷರಾಗಿ ರಾಜೇಶ್ ಗೌಡ ಪಯ್ಯೆ, ಪ್ರಧಾನ ಕಾರ್ಯದರ್ಶಿಯಾಗಿ ನವಾಜ್ ನೆಲ್ಲಿಗುಡ್ಡೆ, ಸಾಮಾಜಿಕ ಜಾಲ ತಾಣದ ಉಸ್ತುವಾರಿಯಾಗಿ ಸಿರಾಜ್ ಕಾಜೂರ್ ಇವರನ್ನು ಆಯ್ಕೆ ಮಾಡಲಾಯಿತು.
ತಾಲೂಕು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ನ ಪ್ರದಾನ ಕಾರ್ಯದರ್ಶಿ ಪ್ರವೀಣ್ ವಿ.ಜಿ, ಭರತ್ ಕುಮಾರ್, ಗ್ರಾಮ ಸಮಿತಿ ಅಧ್ಯಕ್ಷ ಶಾಹುಲ್ ಹೆಚ್.ಎನ್ ಕಿಲ್ಲೂರ್, ಕಾರ್ಯದರ್ಶಿ ಗುರು ಕಿಲ್ಲೂರ್, ಸಾಮಾಜಿಕ ಜಾಲ ತಾಣದ ಸಿದ್ದಿಕ್ ಕಾಜೂರ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.