ನಾರಾವಿಯಲ್ಲಿ ಶ್ರೀ ಭೂಮಿಕಾ ಎಲೆಕ್ಟ್ರಿಕಲ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಸೂಪರ್ ಮಾರ್ಕೆಟ್ ಶುಭಾರಂಭ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ನಾರಾವಿ: ನಾರಾವಿ ಬಸ್ ನಿಲ್ದಾಣದ ಬಳಿ ನಾರಾವಿ ಗ್ರಾ.ಪಂ ನೂತನ ವಾಣಿಜ್ಯ ಸಂರ್ಕೀರ್ಣದ ಮೊದಲನೇ ಮಹಡಿಯಲ್ಲಿ ನಾರಾವಿ ಎನ್.ವೀಠಪ್ಪ ಪ್ರಭುರವರ ಮಾಲಕತ್ವದ ಶ್ರೀ ಭೂಮಿಕಾ ಎಲೆಕ್ಟ್ರಿಕಲ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಸೂಪರ್ ಮಾರ್ಕೆಟ್ ಸಂಸ್ಥೆಯು ಅ.17 ರಂದು ಶುಭಾರಂಭಗೊಂಡಿತು.


ನೂತನ ಸಂಸ್ಥೆಯನ್ನು ಉಡುಪಿ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ನಾರಾವಿ ಗ್ರಾ.ಪಂ ಮಾಜಿ ಅಧ್ಯಕ್ಷ ರವೀಂದ್ರ ಪೂಜಾರಿ ಬಾಂದೊಟ್ಟು, ನಾರಾವಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎನ್ ಸುಧಾಕರ ಭಂಡಾರಿ, ನಾರಾವಿ ವೇಣುಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಉದ್ಯಮಿ ಶ್ರೀನಿವಾಸ ಕಿಣಿ, ನಾರಾವಿ ಸೂರ್ಯ ನಾರಾಯಣ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣತಂತ್ರಿ ಪ್ರಮುಖರಾದ ಸುರೇಶ್ ಪ್ರಭು, ಜನಾರ್ದನ ಪ್ರಭು, ಪ್ರಕಾಶ್ ಪ್ರಭು, ಮಧುಸೂದನ್ ಪ್ರಭು, ಧನಂಜಯ ಪ್ರಭು, ರೂಪೇಶ್ ಜೈನ್, ವಿನಯ ಕುಮಾರ್ ಹೆಗ್ಡೆ ಉಪಸ್ಥಿತರಿದ್ದರು.

ಬಿಜೆಪಿ ನಾರಾವಿ ಗ್ರಾಮ ಸಮಿತಿ ಅಧ್ಯಕ್ಷ ವಸಂತ ಆಚಾರ್ಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬಂದಂತಹ ಅತಿಥಿ ಗಣ್ಯರನ್ನು ಸಂಸ್ಥೆಯ ಮಾಲಕ ಎನ್ ವೀಠಪ್ಪ ಪ್ರಭು ಮತ್ತು ಮಕ್ಕಳು ಸತ್ಕರಿಸಿ, ಕೃತಜ್ಞತೆ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.