ಹೊಸಂಗಡಿ: ಕೊರೋನ ವಿರುದ್ಧ ಬೀದಿ ನಾಟಕದ ಮೂಲಕ ಜನಜಾಗೃತಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಹೊಸಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆ ಗುರುವಾಯನಕೆರೆ ವಿಭಾಗ, ಗ್ರಾ.ಪಂ.ಹೊಸಂಗಡಿ, ಆರಕ್ಷಕ ಠಾಣೆ ವೇಣೂರು, ಪ್ರಾಥಮಿಕ ಆರೋಗ್ಯ ಕೇಂದ್ರ ವೇಣೂರು ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ದಾವಣಗೆರೆ ತಂಡದಿಂದ ಕೊರೋನ ವಿರುದ್ಧ ಬೀದಿ ನಾಟಕದ ಮೂಲಕ ಜನ ಜಾಗೃತಿ ಕಾರ್ಯಕ್ರಮ ಹೊಸಂಗಡಿ ಗ್ರಾಮದ ಪಡ್ಡಂದಡ್ಕದಲ್ಲಿ ಅ.16 ರಂದು ಜರುಗಿತು.


ನಾರಾವಿ ಕ್ಷೇತ್ರದ ಜಿ.ಪಂ. ಸದಸ್ಯ ಧರಣೇಂದ್ರ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಡಿ, ಶ್ರೀ ಕ್ಷೇತ್ರದ ಧರ್ಮಸ್ಥಳದ ಗ್ರಾಮಾಭಿವೃದ್ದಿ ಯೋಜನೆಯಿಂದ ಕೃಷಿ ಚಟುವಟಿಗಳಿಗೆ ಸಹಾಯವಲ್ಲದೆ ನಾಡಿನ ನಾಗರಿಕರ ಆರೋಗ್ಯದ ಬಗ್ಗೆ ಸದಾ ಸಹಾಯದ ಹಸ್ತಚಾಚಿದ್ದು, ಕೊರೋನದಂತಹ ಮಹಾಮಾರಿಯ ಬಗ್ಗೆ ನಾಟಕ ರೂಪದ ಮೂಲಕ ಜನಜಾಗೃತಿ ಸಂಘಟಿಸಿದಕ್ಕೆ ಕೊರೊನ ವಾರಿಯರ್ಸ್‌ನ ಬಳಗಕ್ಕೆ ಕೃತಜ್ಞತೆ ಸಲ್ಲಿಸಿದರು.
ಮುಖ್ಯ ಅತಿಥಿ ವೇಣೂರು ಆರಕ್ಷಕ ಠಾಣಾಧಿಕಾರಿ ಲೋಲಾಕ್ಷ ಮಾತಾಡಿ, ಕೊರೋನ ವಿರುದ್ಧ ಯುದ್ಧದಲ್ಲಿ ನಮ್ಮ ಸಿಬಂದಿ ವರ್ಗ ಸದಾ ಕಾರ್ಯಪ್ರವರ್ತರಾಗಿದ್ದು, ವೈಯಕ್ತಿಕ ಸ್ವಚ್ಚತೆಯನ್ನು ಕಾಪಾಡುವ ಮೂಲಕ ಕೊರೋನಾ ನಿರ್ಮೂಲನ ಮಾಡಬಹುದು ಎಂದರು.
ದ.ಕ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ವೇಣೂರು ಗ್ರಾ.ಪಂ ಅಧ್ಯಕ್ಷೆ ಶೋಭಾ ಹೆಗಡೆ, ಗುರುವಾಯನಕೆರೆ ವಿಭಾಗದ ಯೋಜನಾಧಿಕಾರಿ ಯಶವಂತ, ಹೊಸಂಗಡಿ ಪಿಡಿಒ ಗಣೇಶ್ ಶೆಟ್ಟಿ, ಮಾಜಿ ಅಧ್ಯಕ್ಷ್ಷೆ ಹೇಮಾ ವಸಂತ್, ಪ್ರಮುಖರಾದ ವಿದ್ಯಾನಂದ ಕುಮಾರ್ ಎರ್ಮೋಡಿ, ಪ.ಸ ರಾಮದಾಸ್, ಇಸ್ಮಾಯಿಲ್ ಕೆ ಪೆರಿಂಜೆ, ಒಕ್ಕೂಟದ ಶೇಖರ್, ಹಿರಿಯ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು, ಊರ ನಾಗರಿಕರು ಉಪಸ್ಥಿತರಿದ್ದರು.
ದಾವಣಗೆರೆ ಕಲಾತಂಡ ವೆಂಕಟೇಶ್ ನೇತೃತ್ವದಲ್ಲಿ ಬೀದಿ ನಾಟಕ, ಪದ್ಯ,ರೂಪಕ ಮಾದ್ಯಮದ ಮೂಲಕ ಜನ ಜಾಗೃತಿ ಮೂಡಿಸಲಾಯಿತು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.