ಲೋಕ ಕಲ್ಯಾಣಕ್ಕಾಗಿ ಪಾದಯಾತ್ರೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಇತ್ತೀಚಿನ ಕೊರೊನಾ ಮಹಾಮಾರಿಯಿಂದ ಈ ಜಗತ್ತು ಪಾರಾಗಿ ಲೋಕ ಕಲ್ಯಾಣವಾಗಲಿ ಎನ್ನುವ ಸದಾಶಯದೊಂದಿಗೆ ಬೆಂಗಳೂರು ಗ್ರಾಮಾಂತರ ನೆಲಮಂಗಲ ತಾಲೂಕಿನ ಅಖಿಲ ಕರ್ನಾಟಕ ಅರ್ಚಕ ಮತ್ತು ಪುರೋಹಿತ ಪರಿಷತ್ತಿನ ತಾಲೂಕು ಘಟಕದ ಉಪಾಧ್ಯಕ್ಷ ನಾಗದತ್ತ ಪುರಾಣಿಕ ರವರು ತಮ್ಮ ಸಹಧರ್ಮಿಣಿಯವರೊಂದಿಗೆ ಅ.12 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನಕ್ಕೆ ಪಾದಯಾತ್ರೆಯಲ್ಲಿ ಆಗಮಿಸಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಸಮಿತಿ ವತಿಯಿಂದ ದಂಪತಿಯನ್ನು ನೇತ್ರಾವತಿ ಸ್ನಾನಘಟ್ಟದ ಬಳಿ ತಾಲೂಕು ಅಧ್ಯಕ್ಷ  ರವಿಕುಮಾರ್ ಭಟ್ ಪಜಿರಡ್ಕ, ಪ್ರಧಾನ ಕಾರ್ಯದರ್ಶಿ  ಕೃಷ್ಣ ಕುಮಾರ ಐತಾಳ ಬೆಳ್ತಂಗಡಿ, ಖಜಾಂಚಿ   ರಾಜೇಶ್ ಹೊಳ್ಳ ಇವರುಗಳು ಸ್ವಾಗತಿಸಿ, ಶ್ರೀ ಕ್ಷೇತ್ರದಲ್ಲಿ ಸ್ವಾಮಿಯ ದರ್ಶನದ ವ್ಯವಸ್ಥೆಗೆ ಸಹಕರಿಸಿದರು.

ಈ ಸಂದರ್ಭದಲ್ಲಿ ನೆಲಮಂಗಲ ತಾಲೂಕು ಸಮಿತಿಯ ಅಧ್ಯಕ್ಷ ಮಂಜುನಾಥ ಭಟ್, ತಾಲೂಕು ಸಂಚಾಲಕ ಮಂಜುನಾಥ ಭಟ್, ತಾಲೂಕು ಸಂಚಾಲಕ ನಾಗಭೂಷಣ್ ಹಾಗೂ ನಿರ್ದೇಶಕ ಚೇತನ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.