ಕರಿಮಣೇಲು ಬಳಿ ಹೋರಿಯನ್ನು ಬಲಿಪಡೆದ ಚಿರತೆ

ವೇಣೂರು: ಇಲ್ಲಿಯ ಕರಿಮಣೇಲು ಖಂಡಿಗದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷಗೊಂಡಿದ್ದು, ಹೋರಿಯನ್ನು ಬಲಿಪಡೆದುಕೊಂಡಿದೆ. ಕಳೆದ ಸುಮಾರು ಮೂರು ವರ್ಷಗಳ ಹಿಂದೆ ಇಲ್ಲಿ ಕಾಣಿಸಿಕೊಂಡಿದ್ದ ಚಿರತೆಯು ಕರಿಮಣೇಲು ಬಳಿಯ ತೋಟದ ಪಂಪ್‌ಶೆಡ್‌ನೊಳಗೆ ಬಿದ್ದು ಗಾಯಗೊಂಡು ಮೃತಪಟ್ಟಿತ್ತು.

ಇದೀಗ ಅದೇ ಪರಿಸರದ ನಿವಾಸಿ ಕೃಷ್ಣ ರಾವ್ ಅವರ ಹೋರಿಯನ್ನು ಬಲಿ ಪಡೆದುಕೊಂಡಿದ್ದು, ಸ್ಥಳೀಯರು ಭಯಭೀತರಾಗಿದ್ದಾರೆ. ಖಂಡಿಗ ಪರಿಸರದ ದಿ|ಗುಣಪಾಲ್ ಜೈನ್ ರವರ ರಬ್ಬರ್ ತೋಟದಲ್ಲಿ ಅರ್ದಂಭರ್ದ ತಿಂದು ಹಾಕಿದ ಹೋರಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ನಾಯಿಗಳು ಬೊಗಳುವ ಸದ್ದು ಕೇಳಿ ಚಿರತೆ ಹೋರಿಯನ್ನು ಬಿಟ್ಟು ಹೋಗಿರಬಹುದು ಎಂದು ಸ್ಥಳೀಯ ನಿವಾಸಿ ಖಂಡಿಗ  ಅರವಿಂದ ಶೆಟ್ಟಿಯವರು ಸಂಶಯ ವ್ಯಕ್ತಪಡಿಸಿದ್ದಾರೆ.

ದ.ಕ ಜಿ.ಪಂ. ಸದಸ್ಯ ಧರಣೇಂದ್ರ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದು, ಅರಣ್ಯ ಇಲಾಖೆ ಹಾಗೂ ಪಶು ಸಂಗೋಪಣಾ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಹೋರಿಯನ್ನು ಕಳೆದುಕೊಂಡಿರುವ ಕೃಷ್ಣ ರಾವ್ ಅವರಿಗೆ ಪರಿಹಾರ ಒದಗಿಸುವಂತೆ ಅವರು ಆಗ್ರಹಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.