ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕದಿಂದ ವೈದ್ಯಕೀಯ ನೆರವು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಉದಯ ಪೂಜಾರಿ ಬಳ್ಳಾಲ್ ಬಾಗ್ ಸ್ಥಾಪಕ ಅಧ್ಯಕ್ಷತೆಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕದ ಬ್ರಹ್ಮಶ್ರೀ ಸೇವಾ ನಿಧಿಯಿಂದ 25ನೇ ಸೇವಾ ಯೋಜನೆಯಾಗಿ ಮಡಂತ್ಯಾರು ನಿವಾಸಿ ರವಿಶಂಕರ್ ಪೂಜಾರಿ ಮತ್ತು ಪೂರ್ಣಿಮಾ ದಂಪತಿ  ಪುತ್ರಿ ಆರಾಧ್ಯ ರವರ ಚಿಕಿತ್ಸಾ ವೆಚ್ಚಕ್ಕೆ ಆರ್ಥಿಕ ನೆರವಿನ ಚೆಕ್ ವಿತರಿಸಲಾಯಿತು.

ಆರಾಧ್ಯ ರವರು ಮಾತನಾಡಲಾಗದ ಹಾಗೂ ಕಿವಿ ಕೇಳಿಸದ ಸಮಸ್ಯೆಯಿಂದ ಬಳಲುತ್ತಿದ್ದು, ಇವರನ್ನು ಬೆಂಗಳೂರಿನ ಮಾನಸ ಇಎನ್ ಟಿ ಕೇಂದ್ರದಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಸಂದರ್ಭದಲ್ಲಿ ವೈದ್ಯರು ಇವರಿಗೆ ತಕ್ಷಣವೇ ಚಿಕಿತ್ಸೆ ನೀಡಿದರೆ ಎಲ್ಲರಂತೆ ಮಾತನಾಡಲು ಹಾಗೂ ಶ್ರವಣ ದೋಷದಿಂದ ಹೊರಬರುವ ಸಾಧ್ಯತೆ ಇದ್ದು, ಚಿಕಿತ್ಸೆಗೆ ಸುಮಾರು 14 ಲಕ್ಷ ರೂ ಅಗತ್ಯವಿದೆ ಎಂದು ತಿಳಿಸಿರುತ್ತಾರೆ
ರವಿಶಂಕರ್ ಪೂಜಾರಿ ಯವರು ಮಂಗಳೂರಿನ ಹೋಟೆಲ್ ಒಂದರಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದು, ಇಷ್ಟು ದೊಡ್ಡ ಮೊತ್ತದ ಚಿಕಿತ್ಸಾ ವೆಚ್ಚ ಭರಿಸುವುದು ಕಷ್ಟದ ಕೆಲಸವಾಗಿದೆ. ಅವರ ಸಮಸ್ಯೆಯನ್ನು ಮನಗಂಡ ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕದ ಸರ್ವ ಸದಸ್ಯರ  ಸಹಕಾರದಿಂದ  25ನೇ ತುರ್ತು ಸೇವಾ ಯೋಜನೆಯಾಗಿ 4೦೦೦೦/-ರೂ.ಗಳ ಚೆಕ್  ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷ ರಾಜೇಶ್ ಕೋಟ್ಯಾನ್, ಪಧಾನ ಕಾರ್ಯದರ್ಶಿ ಅರುಣ್ ಕುಮಾರ್, ಕೋಶಾಧಿಕಾರಿ ಹರ್ಷ ಕೋಟ್ಯಾನ್, ಬೆಳ್ತಂಗಡಿ ವಲಯ ಸಂಚಾಲಕರಾದ ಸುರೇಂದ್ರ ಕೋಟ್ಯಾನ್, ಮಧುಕರ್ ಪುಂಜಾಲಕಟ್ಟೆ, ಸುಧೀರ್ ಪೆರ್ಲ, ಅಶೋಕ್ ಸ್ನೇಕ್, ವಿಜಿತ್ ಪೂಜಾರಿ ಮುಂಡಾಜೆ, ವಿಶ್ವನಾಥ್ ಬುಡೆಂಗೊಟ್ಟು, ಸುಜೀತ್ ಮಾಲಾಡಿ, ಪ್ರಶಾಂತ್ ದಾನ, ಪುಷ್ಪರಾಜ್ ಪುರಿಯ, ಹರಿಪ್ರಸಾದ್ ಪುರಿಯ, ರಾಜ್ ಕೋಟ್ಯಾನ್ ಮದ್ದಡ್ಕ, ಲಕ್ಷಣ್ ಮೆಸ್ಕಾಂ ಮಡಂತ್ಯಾರ್, ಸುನೀಲ್ ಉಪಸ್ಥಿತಿತರಿದ್ದರು.

ಆರಾಧ್ಯರವರ ಚಿಕಿತ್ಸಾ ವೆಚ್ಚಕ್ಕೆ ಇನ್ನು ಹೆಚ್ಚಿನ ಧನಸಹಾಯದ ಅಗತ್ಯವಿದ್ದು ದಾನಿಗಳು, ನೆರವು ನೀಡುವವರು ನೇರವಾಗಿ ಪೂರ್ಣಿಮಾ ಅವರ ಬ್ಯಾಂಕ್ ಜಮಾ ಮಾಡಿ ಪುಟ್ಟ ಬಾಲಕಿಯ ಸಂಕಷ್ಟಕ್ಕೆ ನೆರವಾಗಬಹುದು.
ಪೂರ್ಣಿಮಾ ಖಾತೆ ಸಂಖ್ಯೆ- 520291028831611 ಕಾರ್ಪೊರೇಷನ್ ಬ್ಯಾಂಕ್ ಮಡಂತ್ಯಾರ್ ಬ್ರಾಂಚ್- IFSCODE-CORP0000145, INR-014500101017343, Google Play-9742621757

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.