ಶ್ರೀ ಧ.ಮಂ ಕಾಲೇಜು ಪತ್ರಿಕೋದ್ಯಮ ವಿಭಾಗದೊಂದಿಗೆ ಸುದ್ದಿ ಮೀಡಿಯಾ ಒಡಂಬಡಿಕೆ ಒಪ್ಪಂದ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಶ್ರೀ ಧ.ಮಂ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮತ್ತು ಬೆಳ್ತಂಗಡಿಯ ಪ್ರತಿಷ್ಠಿತ ಸುದ್ದಿ ಮೀಡಿಯಾದೊಂದಿಗೆ ವರದಿ, ವೀಡಿಯೋ ವಿನಿಯೋಗ ಮಾಡಿಕೊಳ್ಳುವ ಕುರಿತ ಒಡಂಬಡಿಕೆಗೆ ಒಪ್ಪಂದಕ್ಕೆ ಅ.15 ರಂದು ಚಾಲನೆ ನೀಡಲಾಯಿತು.
ಉಜಿರೆ ಶ್ರೀ ಧ.ಮಂ ಕಾಲೇಜಿನ ಪ್ರಾಂಶುಪಾಲ ಡಾ. ಸತೀಶ್ಚಂದ್ರ, ಸುದ್ದಿ ಬಿಡುಗಡೆ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ ಶಿವಾನಂದ ಒಪ್ಪಂದಕ್ಕೆ ಸಹಿ ಹಾಕಿದರು.


ಈ ಸಂದರ್ಭದಲ್ಲಿ ಪ್ರಾಂಶುಪಾಲ ಡಾ. ಸತೀಶ್ಚಂದ್ರ ರವರು ಮಾತನಾಡುತ್ತಾ, ಸುದ್ದಿ ಬಿಡುಗಡೆ ಪ್ರಾರಂಭವಾದ 1986ರಲ್ಲಿಯೇ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಪ್ರಾರಂಭವಾಗಿದ್ದು, ಪತ್ರಿಕೆಯ ಜೊತೆಗೆ ನಾನೂ ಬೆಳೆದಿದ್ದೇನೆ. ಈ ಒಡಂಬಡಿಕೆಯ ಮೂಲಕ ಎರಡೂ ಸಂಸ್ಥೆಗಳು ಹೊಂದಾಣಿಕೆ ಮೂಲಕ ವೀಕ್ಷಕರಿಗೆ ಓದುಗರಿಗೆ ಹೆಚ್ಚಿನ ಪ್ರಯೋಜನವಾಗಲಿ ಎಂದರು.


ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ ಶಿವಾನಂದ ರವರು ಮಾತನಾಡಿ, ಎರಡೂ ಸಂಸ್ಥೆಗಳ ಒಪ್ಪಂದದಿಂದ ಗ್ರಾಮೀಣ ಪ್ರದೇಶದ ವರದಿಗಳಿಗೆ ಆದ್ಯತೆ ನೀಡಲಾಗುವುದು. ಎಸ್‌ಡಿಎಂ ಸಂಸ್ಥೆಯು ಹಾಗೂ ವಿದ್ಯಾರ್ಥಿಗಳು ನಮ್ಮ ಸುದ್ದಿಪತ್ರಿಕೆ ಹಾಗೂ ಮಾಧ್ಯಮಕ್ಕೆ ಅತ್ಯುತ್ತಮವಾಗಿ ಪ್ರೋತ್ಸಾಹವನ್ನು ನೀಡುತ್ತಾ ಬಂದಿದ್ದಾರೆ. ಈ ಒಪ್ಪಂದ ಮೂಲಕ ಓದುಗರು ಹಾಗೂ ವೀಕ್ಷಕರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದರು.


ಶ್ರೀ ಧ.ಮಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ ಹೆಗ್ಡೆ ಸುದ್ದಿ ಬಿಡುಗಡೆ ಬೆಳ್ತಂಗಡಿಯ ವ್ಯವಸ್ಥಾಪಕ ಮಂಜುನಾಥ ರೈ, ಸುದ್ದಿ ಮೀಡಿಯಾ ಸಿಇಒ ಸಿಂಚನ ಊರುಬೈಲು, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.