ಕೊಟ್ಟಗೆಹಾರದಲ್ಲಿ ಅಕ್ರಮ ಗಾಂಜಾ ಮಾರಾಟ: ತಾಲೂಕಿನ ಮೂವರ ಬಂಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಬಳಿಯ ತರುವೆ ಗ್ರಾ.ಪಂ ವ್ಯಾಪ್ತಿಯ ಚೌಡೇಶ್ವರಿ ದೇವಸ್ಥಾನದ ಸಮೀಪ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದ, ಖಚಿತ ಮಾಹಿತಿ ಪಡೆದುಕೊಂಡ ಸಿ.ಇ.ಎನ್ ಪೊಲೀಸರು ದಾಳಿ ನಡೆಸಿ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಮತ್ತು ಪುದುವೆಟ್ಟಿನ ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ಅ.13ರಂದು ವರದಿಯಾಗಿದೆ.

ಪುದುವೆಟ್ಟು ಗ್ರಾಮದ ಮೇಲಿನ ಕುಂಟ್ಯಾನ ಸಾಮೇದ ಕಲಪು ನಿವಾಸಿ ಕಾರು ಚಾಲಕರಾಗಿರುವ ಮುಸ್ತಾಫ (24ವ), ಚಾರ್ಮಾಡಿ ಗ್ರಾಮದ ಕಕ್ಕಿಂಜೆ ಗಾಂಧಿ ನಗರ ನಿವಾಸಿ ಗಾರೆ ಕೆಲಸ ಮಾಡುತ್ತಿರುವ ಉಮ್ಮರುಲ್ ಫಾರೂಕ್(24ವ), ಮತ್ತು ಕಕ್ಕಿಂಜೆ ಗಾಂಧಿನಗರ ಮಸೀದಿ ಬಳಿಯ ನಿವಾಸಿ ಚಾಲಕನಾಗಿರುವ ಮಹಮ್ಮದ್ ನೌಶದ್(24ವ) ಬಂಧಿತ ಆರೋಪಿಗಳು. ಬಂಧಿತರಿಂದ ಸುಮಾರು ರೂ. 50 ಸಾವಿರ ಮೌಲ್ಯದ 2 ಕೆ.ಜಿ ಗಾಂಜಾ, ಹಾಗೂ ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡಲು ಬಳಸುತ್ತಿದ್ದ ಗ್ರೇ ಕಲರ್‍ನ ಹೊಂಡಾ ಡಿಯೋ
ಸ್ಕೂಟರ್( ಕೆ.ಎ 21 ಇಎ-4584)ನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಆರೋಪಿಗಳು ಗಾಂಜಾವನ್ನು ಕಾಸರಗೋಡು ಬಳಿಯ ಮೀಯಪದವು ಎಂಬಲ್ಲಿ ರಹೀಂ ಎಂಬವನಿಂದ ಖರೀದಿಸಿ ತಂದು ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿದ್ದರು. ಈ ತಂಡ ಕಾಲೇಜು ಹಾಗೂ ಹಾಸ್ಟೇಲ್‍ಗಳ ಪರಿಸರದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವ ವಿಷಯ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಈ ಅಕ್ರಮ ದಂಧೆ ಯಲ್ಲಿ ಇನ್ನಷ್ಟು ಮಂದಿ ಭಾಗವಹಿಸಿಿರುವ ಶಂಕೆಯಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.