ನ್ಯಾಯವಾದಿ ಸೇವಿಯರ್ ಪಾಲೇಲಿಯವರ ತಂದೆ ರಪ್ಪಾಯಿ ಪಾಲೇಲಿ ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ನಾವೂರು: ಇಲ್ಲಿಯ ಕಟ್ಟಾಜೆ ಮನೆ ನಿವಾಸಿ, ನ್ಯಾಯವಾದಿ, ಡಾ.ಸೇವಿಯರ್ ಪಾಲೇಲಿ ಅವರ ತಂದೆ, ರಪ್ಪಾಯಿ ಪಾಲೇಲಿ (79.ವ) ಅವರು ಅಲ್ಪಕಾಲದ ಅಸೌಖ್ಯದಿಂದ ಅ.4ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಸರಳ ಸಜ್ಜನಿಕೆಯವರಾಗಿದ್ದ ಇವರು ಕೃಷಿಕರಾಗಿದ್ದು, ಸ್ನೇಹಮಯ ವ್ಯಕ್ತಿತ್ವ ಹೊಂದಿದವರಾಗಿದ್ದರು. ಮೃತರು ಪತ್ನಿ ತ್ರೇಸ್ಯಾ ಪಾಲೇಲಿ, ಪುತ್ರರಾದ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಜೋಸೆಫ್ ಪಾಲೇಲಿ, ಸಂಘಟಕ ಸೇವಿಯರ್ ಪಾಲೇಲಿ, ಪುತ್ತೂರು ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿರುವ ವರ್ಗೀಸ್ ಪಾಲೇಲಿ ಮತ್ತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿರುವ ಲಾರೆನ್ಸ್ ಪಾಲೇಲಿ, ಇಬ್ಬರು ಪುತ್ರಿಯರಾದ ರೋಸಾ ಪಿ.ಪಿ ಪಾಲೇಲಿ ಪುದುವೆಟ್ಟು ಮತ್ತು ಸ್ನೇಹಲತಾ ಪಾಲೇಲಿ ತೋಟತ್ತಾಡಿ ಹಾಗೂ ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.