ದಕ್ಷಿಣಕನ್ನಡ ಜಿಲ್ಲಾಧಿಕಾರಿ ಡಾ|.ಕೆ.ವಿ. ರಾಜೇಂದ್ರ ಅವರಿಗೂ ಕೋವಿಡ್ ಸೋಂಕು ದೃಢಪಟ್ಟಿದ್ದು ಮನೆಯಲ್ಲೇ ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ಜೊತೆಗೆ ಪತ್ನಿ ಹಾಗೂ ಮಗುವಿಗೂ ಪರೀಕ್ಷೆ ನಡೆಸಿದ ಸಂದರ್ಭ ಅವರ ವರದಿಯಲ್ಲೂ ಸೋಂಕು ದೃಢಪಟ್ಟಿದೆ ಹಾಗಾಗಿ ಅವರನ್ನೂ ಹೋಂ ಕ್ವಾರಂಟೈನ್ ಮಾಡಲಾಗಿದೆ.
ಜಿಲ್ಲಾಧಿಕಾರಿಯವರು ಪ್ರಸ್ತುತ ಗೃಹ ನಿಗಾವಣೆಯಲ್ಲಿದ್ದು, ಗೃಹ ಕಚೇರಿಯಿಂದಲೇ ಕರ್ತವ್ಯವನ್ನು ನಿರ್ವಹಿಸುತ್ತಿರುತ್ತಾರೆ. ಈ ಸಮಯದಲ್ಲಿ ಜಿಲ್ಲಾಧಿಕಾರಿಯವರಿಗೆ ಯಾವುದೇ ಕರೆಗಳನ್ನು ಮಾಡದೇ ಅವಶ್ಯವಿದ್ದಲ್ಲಿ ಮಾತ್ರ ವಾಟ್ಸಪ್ ಹಾಗೂ ಎಸ್ಎಮ್ ಎಸ್ ಮೂಲಕ ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.
ಕೋವಿಡ್ ಪ್ರಕರಣದ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಕಮಿಷನರ್ ಕೂಡಾ ಹೋಮ್ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ದಿನೇ ದಿನೆ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿದೆ, ಜಿಲ್ಲೆಯಲ್ಲಿ ಸೋಮವಾರ 303ಪಾಸಿಟಿವ್ ಪ್ರಕಾರರಣಗಳು ದಾಖಲಾಗಿದ್ದು ಸಾರ್ವಜನಿಕರು ಜಾಗರೂಕತೆ ವಹಿಸಬೇಕಾಗಿದೆ.