ಬೆಳ್ತಂಗಡಿ: ಇಲ್ಲಿಯ ಚರ್ಚ್ ರಸ್ತೆಯ ಬಳಿ ಸಸ್ಯಾಹಾರಿ ಮತ್ತು ಮಾಂಸಹಾರಿ ಹೋಟೆಲ್ `ಪ್ರಕೃತಿ’ ಇದರ ಶುಭಾರಂಭವು ಅ.12ರಂದು ಜರುಗಿತು.
ನೂತನ ಸಂಸ್ಥೆಯನ್ನು ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಜನಾರ್ದನ ಗೌಡ ಕೆ. ಉದ್ಘಾಟಿಸಿದರು. ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ತಾಲೂಕು ಯೋಜನಾಧಿಕಾರಿ ಜಯಕರ ಶೆಟ್ಟಿ, ಬೆಳ್ತಂಗಡಿ ಗುರುಕೃಪಾ ಕ್ಯಾಟರರ್ಸ್ ಮಾಲಕರಾದ ತಿಮ್ಮಪ್ಪ ಪೂಜಾರಿ ಆಗಮಿಸಿ ಶುಭ ಕೋರಿದರು.
ಆಗಮಿಸಿದ ಅತಿಥಿ-ಗಣ್ಯರನ್ನು ಹೋಟೆಲ್ ಮಾಲಕರಾದ ಪ್ರಕಾಶ್ ಮೇರ್ಲ ಮತ್ತು ಶ್ರೀಮತಿ ಅಶ್ವಿನಿ ಪ್ರಕಾಶ್ ಮೇರ್ಲ ಸ್ವಾಗತಿಸಿ, ಕೃತಜ್ಞತೆ ಸಲ್ಲಿಸಿದರು.