ನಾವೂರು ಕುಲಾಲರ ಸಂಘದ ಪದಗ್ರಹಣ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಸ್ವ ಸಾಮರ್ಥ್ಯದಿಂದ ಸಮಾಜದಲ್ಲಿ ಸದೃಢವಾಗಬೇಕು: ಕಸ್ತೂರಿ ಪಂಜ


ಬೆಳ್ತಂಗಡಿ : ಕುಲಾಲ ಸಮುದಾಯ ಅಧರ್ಮವನ್ನು ಬಯಸದೆ ನ್ಯಾಯ ನೀತಿಯಲ್ಲಿರುವ ಹಿಂದೂ ಧರ್ಮದ ಒಂದು ಜಾತಿ. ಇನ್ನೊಬ್ಬರನ್ನು ಮೆಟ್ಟದೆ ಸ್ವ ಸಾಮರ್ಥ್ಯದಿಂದ ಮೇಲೇರಿದರೆ ಸಮಾಜದಲ್ಲಿ ಶಾಶ್ವತವಾಗಿ ಸದೃಢವಾಗಿರಬಹುದು ಎಂದು ದ.ಕ.ಜಿ.ಪಂ.ಉಪಾಧ್ಯಕ್ಷೆ ಕಸ್ತೂರಿ ಪಂಜ ಹೇಳಿದರು.
ಅವರು ಅ.11 ರಂದು ನಾವೂರು ಕುಲಾಲ ಸಭಾ ಭವನದಲ್ಲಿ ನಡೆದ ನಾವೂರು ಮೂಲ್ಯರ ಯಾನೆ ಕುಲಾಲರ ಸಂಘ, ಕುಲಾಲರ ಯುವ ವೇದಿಕೆ, ಕುಂಭಶ್ರೀ ಮಹಿಳಾ ಮಂಡಲದ 2020-22ನೇ ಸಾಲಿನ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಹಳೆ ಬೇರು – ಹೊಸ ಚಿಗುರು ಸೇರಿರಲು ಮರ ಸೊಬಗು ಎಂಬ ಮಾತಿನಂತೆ ನಾವು ಕುಟುಂಬದ ಜೊತೆ ಸಂಸ್ಕೃತಿಯನ್ನು ಬೆಳೆಸಿಕೊಂಡು ಹೋಗಬೇಕು. ಸಂಘಟನೆಯಿಂದ ಸಮಾಜವನ್ನು ಬೆಳೆಸುವ ಕೆಲಸವಾಗಬೇಕು ಎಂದರು.
ಕುಲಾಲ ಕುಂಬಾರ ಯುವ ವೇದಿಕೆ ಜಿಲ್ಲಾಧ್ಯಕ್ಷ ಸುಧಾಕರ ಕುಲಾಲ್ ಪದಗ್ರಹಣ ನೆರವೇರಿಸಿ, ಯುವ ಸಮುದಾಯ ಸಂಘಟನೆ ಬಲಪಡಿಸುವ ಜೊತೆಗೆ ಸಮುದಾಯದ ಅಸಕ್ತ ಕುಟುಂಬಕ್ಕೆ ನೆರವಾಗಬೇಕು ಎಂದರು.
ಅತಿಥಿ ಮಂಗಳೂರು ಉತ್ತರ ಕ್ಷೇತ್ರದ ಕುಲಾಲರ ಯುವ ವೇದಿಕೆ ಅಧ್ಯಕ್ಷ ಗಣೇಶ್ ಕುಲಾಯಿ ಮಾತನಾಡಿ, ಸಂಘಟನೆಯಲ್ಲಿ ಸಕ್ರೀಯವಾಗಿ ತೊಡಗಿಕೊಂಡು ಬಲಪಡಿಸುತ್ತಾ ಹೋಗುವಾಗ ಟೀಕೆಗಳು ಸಾಮಾನ್ಯ. ಅದರ ಬಗ್ಗೆ ಕುಗ್ಗದೆ ಸಮುದಾಯದ ಪೋಷಣೆಯಲ್ಲಿ ತೊಡಗಿದಾಗ ರಚನಾತ್ಮಕವಾದ ಸಮಾಜ ನಿರ್ಮಾಣವಗಲು ಸಾಧ್ಯ? ಎಂದರು.
ತಾಲೂಕು ಮೂಲ್ಯರ ಯಾನೆ ಕುಲಾಲರ ಸಂಘದ ಅಧ್ಯಕ್ಷ ಹರೀಶ್ ಕಾರಿಂಜ ಸಮಾರಂಭದ ಅಧ್ಯಕ್ಷತೆ ವಹಿಸಿ, ಹಿರಿಯರ ಮಾರ್ಗದರ್ಶನದಲ್ಲಿ ಯುವ ಸಮುದಾಯದ ಪಾಲ್ಗೊಳ್ಳುವಿಕೆಯಿಂದ ಕುಲಾಲ ಸಮಾಜ ಎಲ್ಲಾ ಕ್ಷೇತ್ರದಲ್ಲೂ ಸದೃಢವಾಗಿ ಬೆಳೆಯಲಿದೆ. ಬಲಿಷ್ಟ ಸಂಘ ರಚಿಸುವ ಸಲುವಾಗಿ ಯುವ ವೇದಿಕೆ ನಿರ್ಮಾಣವಾಗಿದೆ ಎಂದರು.
ಯುವ ವೇದಿಕೆಯ ಸಂಘಟನಾ ಕಾರ್ಯದರ್ಶಿ ಉಮೇಶ್ ಕುಲಾಲ್, ತಾ.ಪಂ. ಉಪಾಧ್ಯಕ್ಷೆ ವೇದಾವತಿ, ಉದ್ಯಮಿ ಕೂಸಪ್ಪ ಮೂಲ್ಯ, ನಾವೂರು ಗ್ರಾ.ಪಂ. ಮಾಜಿ ಅಧ್ಯಕ್ಷೆ ಲಲಿತಾ, ನಾವೂರು ಮೂಲ್ಯರ ಯಾನೆ ಕುಲಾಲರ ಸಂಘದ ಅಧ್ಯಕ್ಷ ನಾರಾಯಣ ಮೂಲ್ಯ, ಕುಂಭಶ್ರೀ ಮಹಿಳಾ ಮಂಡಲ ಅಧ್ಯಕ್ಷೆ ಜಯಂತಿ ಕುಶಾಲಪ್ಪ ಕಣಾಲು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕುಲಾಲ ಸಮುದಾಯದ ಹಿರಿಯ ಗುರಿಕಾರರಾದ ಸುಂದರ ಮೂಲ್ಯ ಬೀಮಂಡೆ, ಡಾಕಯ್ಯ ಮೂಲ್ಯರನ್ನು ಹಾಗೂ ತಾಲೂಕು ಸಂಘದ ಅಧ್ಯಕ್ಷ ಹರೀಶ್ ಕಾರಿಂಜ, ಸಂಘದ ನಿರ್ದೇಶಕರಾದ ಪುಷ್ಪರಾಜ ಲಾಯಿಲ ರನ್ನು ಸನ್ಮಾನಿಸಲಾಯಿತು.
ರಾಜ್ ಕುಮಾರ್ ಲಾಯಿಲ ಸ್ವಾಗತಿಸಿದರು. ಪುಷ್ಪರಾಜ್ ಲಾಯಿಲ ನಿರೂಪಿಸಿದರು. ವಿಜಯ್ ಕುಲಾಲ್ ವಂದಿಸಿದರು

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.