ತಾಲೂಕು ಯುವ ಮರಾಟಿ ಸೇವಾ ಸಂಘದ ಮಹಾಸಭೆ, ಸಾಧನಾ ಪುರಸ್ಕಾರ ಮತ್ತು ಪ್ರತಿಭಾ ಪುರಸ್ಕಾರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಮರಾಟಿಗರು ಸರಕಾರದಿಂದ ದೊರೆಯುವ ಸಕಲ ಸೌಲಭ್ಯಗಳನ್ನು ತಮ್ಮ ಅಭಿವೃದ್ಧಿಗಾಗಿ ಬಳಸಿಕೊಳ್ಳಬೇಕು. ಅಂಜಿಕೆಯಿಂದ ಸೌಲಭ್ಯ ಬಳಸಿಕೊಳ್ಳದಿದ್ದರೆ ಇರುವ ಸೌಲಭ್ಯಗಳೂ ಕೈತಪ್ಪುವ ಸಾಧ್ಯತೆ ಇರುತ್ತದೆ. ಸಮುದಾಯದ ಜನತೆ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದಾಗ ಉತ್ತಮ ರೀತಿಯಲ್ಲಿ ಜೀವನ ನಡೆಸಿ ಸಮಾಜದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ತಾಲೂಕು ಯುವ ಮರಾಟಿ ಸೇವಾ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಲಾಯಿಲ ತಿಳಿಸಿದರು.
ಅವರು ತಾಲೂಕು ಯುವ ಮರಾಟಿ ಸೇವಾ ಸಂಘದಿಂದ ಗುರುವಾಯನಕೆರೆಯಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಮಹಾಸಭೆ, ಸಾಧನಾ ಪುರಸ್ಕಾರ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಂಗಳೂರು ವಿವಿ ಜೀವಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ.ಲವೀನಾ ಕೆ.ಬಿ.ಅವರಿಗೆ ಸಾಧನಾ ಪುರಸ್ಕಾರ ನೀಡಿ ಗೌರವಿಸಲಾಯಿತು
ಸಂಘದ 2020-21ನೇ ಸಾಲಿನ ಪದಾಧಿಕಾರಿಗಳ ಪಟ್ಟಿಯನ್ನು ಪರಿಷ್ಕರಿಸಲಾಗಿದ್ದು, ಉಪಾಧ್ಯಕ್ಷರಾಗಿ ಉಮೇಶ್ ನಾಯ್ಕ್ ನ್ಯಾಯತರ್ಪು, ಸಾಂಸ್ಕøತಿಕ ಕಾರ್ಯದರ್ಶಿಯಾಗಿ ಸಚಿನ್ ತೆಂಕಕಾರಂದೂರು, ಪತ್ರಿಕಾ ಮಾಧ್ಯಮ ಕಾರ್ಯದರ್ಶಿಯಾಗಿ ಹರ್ಷಿತ್ ಪಿಂಡಿವನ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಡಾ. ಲವೀನಾ ಕೆ.ಬಿ., ಪ್ರಮೋದ್ ನಾಯ್ಕ್, ರಾಜೇಶ್ ನಾಯ್ಕ್ ಓಡಿಲ್ನಾಳ ಅವರನ್ನು ಆಯ್ಕೆ ಮಾಡಲಾಯಿತು.
ಬೆಳ್ತಂಗಡಿ ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಅಪೇಕ್ಷಾ ಎಲ್. ನಾಯ್ಕ್ ಬಡಕೂಡಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಘದ ವತಿಯಿಂದ ಜನವರಿಯಲ್ಲಿ ಹಮ್ಮಿಕೊಂಡಿದ್ದ ಪ್ರಪ್ರಥಮ ಮರಾಟಿ ಕ್ರೀಡಾಕೂಟದ ವಿವಿಧ ವಿಭಾಗಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಪುತ್ತೂರು ಶ್ರೀ ಮಹಮ್ಮಾಯಿ ಸಹಕಾರಿ ಸೌಹಾರ್ದ ನಿಯಮಿತದ ಸೌಲಭ್ಯಗಳ ಕುರಿತು ನಿರ್ದೇಶಕರಾದ ಡಿ.ರಾಮಕೃಷ್ಣ ನಾಯ್ಕ್ ಪಿಂಡಿವನ ಮಾಹಿತಿ ನೀಡಿದರು. ಸಂಘದ ಗೌರವಾಧ್ಯಕ್ಷ ಲಿಂಗಪ್ಪ ನಾಯ್ಕ ಬಡಕೋಡಿ , ಉಪಾಧ್ಯಕ್ಷ ವಸಂತ ನಾಯ್ಕ್, ಪ್ರಧಾನ ಕಾರ್ಯದರ್ಶಿ ವಾಸುದೇವ ನಾಯ್ಕ್, ಕ್ರೀಡಾ ಕಾರ್ಯದರ್ಶಿ ಸತೀಶ್ ಹೆಚ್.ಎಲ್., ಬೆಳ್ತಂಗಡಿ ವಲಯ ಅಬಕಾರಿ ನಿರೀಕ್ಷಕಿ ಸೌಮ್ಯಲತಾ, ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಸಂಘಟನಾ ಕಾರ್ಯದರ್ಶಿ ತಾರನಾಥ್ ನಾಯ್ಕ್ ಸ್ವಾಗತಿಸಿದರು, ಕಾರ್ಯದರ್ಶಿ ಪ್ರಸಾದ್ ನಾಯ್ಕ್ ಪ್ರಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಉಮೇಶ್ ಕೆ. ನಾಯ್ಕ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಶರತ್‍ಕುಮಾರ್ ವರದಿ ವಾಚಿಸಿ, ಕೋಶಾಧಿಕಾರಿ ಪ್ರಜ್ವಲ್ ಲೆಕ್ಕಪತ್ರ ಮಂಡಿಸಿದರು. ಜೊತೆ ಸಾಂಸ್ಕೃತಿಕ ಕಾರ್ಯದರ್ಶಿ ಸುಷ್ಮಾ ಪಿ.ಎಸ್. ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.