ಬೆಳ್ತಂಗಡಿ ನ್ಯೂಬ್ರದರ್ಸ್ ಮಾಲಕ ಚಂದ್ರಶೇಖರ್ ನಿಧನ

ಬೆಳ್ತಂಗಡಿ: ಬೆಳ್ತಂಗಡಿ ನ್ಯೂ ಬ್ರದರ್ಸ್ ಬೇಕರಿ ಮಾಲಕ ಚಂದ್ರಶೇಖರ್ ನಾಯರ್(53.ವ) ಅವರು ಅಲ್ಪ ಕಾಲದ ಅಸೌಖ್ಯದಿಂದ ಬಳಲಿ ಅ.12ರಂದು ಮುಂಜಾನೆ ನಿಧನರಾದರು.
ಕುವೆಟ್ಟು ಗ್ರಾಮದ ಗುರುವಾಯನಕೆರೆ ಯರ್ಡೂರು ಎಂಬಲ್ಲಿ ವಾಸವಾಗಿದ್ದ ಇವರು ಬೆಳ್ತಂಗಡಿಯಲ್ಲಿ ಹಲವು ವರ್ಷಗಳಿಂದ ಬೇಕರಿಯನ್ನು ನಡೆಸುತ್ತಿದ್ದು, ಎಲ್ಲರ ಪ್ರೀತಿ -ವಿಶ್ವಾಸಕ್ಕೆ ಪಾತ್ರರಾಗಿದ್ದರು. ಮೃತರು ಪತ್ನಿ ಪುತ್ರಿ ಸೌಮ್ಯ ಬಂಧು ವರ್ಗದವರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಮೃತರ ಮನೆಗೆ ತಾಪಸ ಗೋಪಿನಾಥ ನಾಯಕ್, ಗ್ರಾ.ಪಂ ಮಾಜಿ ಸದಸ್ಯ ಪುರಂದರ ಶೆಟ್ಟಿ, ಮಂಜುನಾಥ ಕುಂಬ್ಲೆ ಸೇರಿದಂತೆ ಗಣ್ಯರು ಆಗಮಿಸಿ ಸಂತಾಪ ಸೂಚಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.