ಬೆಳ್ತಂಗಡಿ: ಪ್ರತಿಷ್ಠಿತ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಕಾರ್ಯದರ್ಶಿ ಯುವ ಉದ್ಯಮಿ ಸ್ವರೂಪ್ ಶೇಖರ್ರವರಿಗೆ 2020ರ ವ್ಯವಹಾರ ಸಮ್ಮೇಳನದಲ್ಲಿ ಸಾಧನಶ್ರೀ ಪ್ರಶಸ್ತಿ ಲಭಿಸಿದೆ.
ಕಳೆದ ಹಲವು ವರ್ಷಗಳಿಂದ ಸ್ವರೂಪ್ ಶೇಖರ್ರವರು ಜೇಸಿ ಸಂಸ್ಥೆಯಲ್ಲಿ ಘಟಕದ ಕೋಶಾಧಿಕಾರಿಯಾಗಿ, ಉಪಾಧ್ಯಕ್ಷರಾಗಿ, ಸಪ್ತಾಹದ ಸಂಯೋಜಕರಾಗಿ ಕಾರ್ಯದರ್ಶಿಯಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಜೊತೆಗೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿದ್ದರು.
ಜೇಸಿ ಭವನದಲ್ಲಿ ನಡೆದ ಸಭೆಯಲ್ಲಿ ಸ್ವರೂಪ್ ಶೇಖರ್ರವರಿಗೆ ಸಾಧನಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜೇಸಿಐ ಬೆಳ್ತಂಗಡಿ ಮಂಜುಶ್ರೀ ಘಟಕದ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ವಲಯಾಧಿಕಾರಿಯಾದ ಕಿರಣ್ಶೆಟ್ಟಿ, ಚಿದಾನಂದ ಇಡ್ಯ , ನಿಕಟಪೂರ್ವಧ್ಯಕ್ಷ ಪ್ರಶಾಂತ್ ಲಾಯಿಲ, ಪೂರ್ವಾಧ್ಯಕ್ಷರುಗಳಾದ ಸಂತೋಷ್ ಪಿ ಕೋಟ್ಯಾನ್ ಬಳಂಜ, ವಸಂತ ಶೆಟ್ಟಿ, ನಾರಾಯಣ ಶೆಟ್ಟಿ ಹಾಗೂ ಪದಾಧಿಕಾರಿಗಳಾದ ಪ್ರಸಾದ್ ಬಿ.ಎಸ್, ವಿಶಾಲ್ ಅಗಸ್ಟಿನ್, ಶೀತಲ್ ಜೈನ್, ಸುಶೀಲ್ ಕುಮಾರ್, ವಿಜಯ್ ನಿಡಿಗಲ್, ಗುರುರಾಜ್ ಗುರಿಪಳ್ಳ, ಪ್ರೀತಂ ಶೆಟ್ಟಿ, ಶಂಕರ್ ರಾವ್, ಆಶಾ ಪ್ರಶಾಂತ್, ಸುಭಾಷಿನಿ, ಸುಧೀರ್, ಜೂನಿಯರ್ ಜೇಸಿ ಅಧ್ಯಕ್ಷ ಸೃಜನ್ ರೈ ಉಪಸ್ಥಿತರಿದ್ದರು.