ಯಂತ್ರಶ್ರೀ ಯೋಧರ ಪ್ರಾತ್ಯಕ್ಷಿಕಾ ತರಬೇತಿ ಕಾರ್ಯಗಾರ

ಬೆಳ್ತಂಗಡಿ: ಬೆಳ್ತಂಗಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಬಿ.ಸಿ ಟ್ರಸ್ಟ್ ಹಾಗೂ ರೋಟರಿ ಕ್ಲಬ್ ಬೆಳ್ತಂಗಡಿ ಇದರ ಸಹಬಾಗಿತ್ವದಲ್ಲಿ ಯಾಂತ್ರೀಕೃತ ಭತ್ತ ಬೇಸಾಯ ಅಭಿಯಾನ 2020&-21 ‘ಯಂತ್ರಶ್ರೀ ಯೋಧರ ಪ್ರಾತ್ಯಕ್ಷಿಕಾ ತರಬೇತಿ ಕಾರ್ಯಗಾರ ಅರಳಿ ಪಡ್ಪು ನಾರಾಯಣ್ ಭಟ್‌ರವರ ಸುಭದ್ರ ಫಾರ್ಂ ನಲ್ಲಿ ಜರುಗಿತು.

ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್ ಎಚ್ ಮಂಜುನಾಥ್ ಕಾರ್ಯಕ್ರಮವನ್ನು ಮಾತನಾಡಿ, ಯಂತ್ರಶ್ರೀ ಕಾರ್ಯಕ್ರಮ ಕೃಷಿ ಬದುಕು ರೈತರ ಬದುಕು ಲಾಭದಾಯಕವಾಗಬೇಕೆಂಬ ಆಶಯದೊಂದಿಗೆ ಈ ಕಾರ್ಯಕ್ರಮ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

ರೋಟರಿ ಕ್ಲಬ್ ಬೆಳ್ತಂಗಡಿ ಇದರ ಅಧ್ಯಕ್ಷ ಧನಂಜಯ್ ರಾವ್, ರೋಟರಿ ಸದಸ್ಯರಾದ ಶರತ್‌ಕೃಷ್ಣ ಪಡ್ವೆಟ್ನಾಯ, ಯೋಜನೆಯ ಸಿಎಚ್‌ಎಸ್‌ಸಿ ಪ್ರಾದೇಶಿಕ ನಿರ್ದೇಶಕರಾದ ಅಬ್ರಹಾಂ, ನಿರ್ದೇಶಕರಾದ ಸತೀಶ್ ಶೆಟ್ಟಿ, ಯೋಜನಾಧಿಕಾರಿ ಜಯಕರ್ ಶೆಟ್ಟಿ, ಅಶೋಕ್, ಸುಧೀರ್,ಉಮೇಶ್, ಕೃಷಿ ಮೇಲ್ವೀಚಾರಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ವತಿಯಿಂದ ರೈತರಿಗೆ ಮಾಸ್ಕ್ ಮತ್ತು ಲಕ್ಮಿತರು ಗಿಡದ ಬೀಜ ವಿತರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.