ಬೆಳ್ತಂಗಡಿ ಮೀಡಿಯಾ ಕ್ಲಬ್ ಲೋಗೊ ಬಿಡುಗಡೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ ತಾಲೂಕು ಮೀಡಿಯಾ ಕ್ಲಬ್ ಇದರ ಲೋಗೊವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಅವರು ಈಗ ದೃಶ್ಯ ಮಾಧ್ಯಮ ಬಹಳ ಪ್ರಬಲವಾಗಿರುವುದರಿಂದ ವರದಿಯಲ್ಲಿ ಆಗಲಿ, ವರದಿ ಸಂಗ್ರಹಣೆಯಲ್ಲಿ ಮತ್ತು ಎಲ್ಲಾ ರೀತಿಯಿಂದಲೂ ಜನತೆಯನ್ನು ಪ್ರಜ್ಞಾವಂತರಾಗಿ ಮಾಡುವ, ಎಚ್ಚರಿಕೆಯನ್ನು ನೀಡುವ, ಸಮಸ್ಯೆಗಳಿಗೆ ಸ್ಪಂದಿಸುವ ಜವಾಬ್ದಾರಿಯನ್ನು ಮಾಧ್ಯಮ ಬಂಧುಗಳು ಮಾಡುತ್ತಿದ್ದಾರೆ. ಬೆಳ್ತಂಗಡಿ ತಾಲೂಕನ್ನು ಪ್ರಜ್ಞಾವಂತ ತಾಲೂಕನ್ನಾಗಿ ಮಾಡುವ ಜವಾಬ್ಧಾರಿ ಮಾಧ್ಯಮ ವರ್ಗದವರ ಮೇಲೆ ಇದೆ. ನಿಮಗೆಲ್ಲರಿಗೂ ಮಂಜುನಾಥ ಸ್ವಾಮಿಯ ಅನುಗ್ರಹ ಇರಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮೀಡಿಯಾ ಕ್ಲಬ್ಬಿನ ಅಧ್ಯಕ್ಷ ಸತೀಶ್ ಪೆರ್ಲೆ, ಕಾರ್ಯದರ್ಶಿ ಉಮೇಶ್ ಕುಲಾಲ್, ಕೋಶಾಧಿಕಾರಿ ಶರತ್, ಬಾಲಕೃಷ್ಣ ಶೆಟ್ಟಿ, ದಿನೇಶ್ ಕೋಟ್ಯಾನ್, ಅನಂತ್ ಭಟ್, ನಿತಿನ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.