ರೋಟರಿ ಕ್ಲಬ್ ದಾನಿಗಳ ಸಹಕಾರದಿಂದ ಬೆಳ್ತಂಗಡಿ ಪ.ಪೂ ಕಾಲೇಜಿಗೆ ವಿಜ್ಞಾನ ಉಪಕರಣಗಳ ಕೊಡುಗೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಬೆಳ್ತಂಗಡಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಜೀವಶಾಸ್ತ್ರ ಪ್ರಯೋಗಾಲಯಕ್ಕೆ ಉಪಕರಣಗಳ ಹಸ್ತಾಂತರ ಅ.9 ರಂದು ನಡೆಯಿತು.
ಬೆಳ್ತಂಗಡಿ ರೋಟರಿ ಕ್ಲಬ್ ಸಹಕಾರದಿಂದ, ಕಾಲೇಜಿನ ಹಿರಿಯ ವಿದ್ಯಾರ್ಥಿನಿ ವೀರಮ್ಮ ಅಚ್ಚಿನಡ್ಕರವರ ದೇಣಿಗೆಯಿಂದ ರೂ.30 ಸಾವಿರ ಮೌಲ್ಯದ ಉಪಕರಣ ನೀಡಲಾಯಿತು. ವಿಧಾನಪರಿಷತ್ ಸದಸ್ಯ, ರೋಟರಿ ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ಪ್ರತಾಪ್ ಸಿಂಹ ನಾಯಕ್  ಕಾಲೇಜಿನ ಪ್ರಾಂಶುಪಾಲ ಸುಕುಮಾರ್ ಜೈನ್‌ರವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಕಾರ್ಯಕ್ರಮದ ಸಂಯೋಜಕ ರೋ. ಬಿ.ಕೆ ಧನಂಜಯ ರಾವ್, ರೋಟರಿ ನಿರ್ದೇಶಕ ರೋ. ಡಿ.ಎಂ. ಗೌಡ, ಮಾಜಿ ಅಧ್ಯಕ್ಷರುಗಳಾದ ರೋ. ಶ್ರೀಕಾಂತ ಕಾಮತ್, ರೋ. ಡಾ| ಶಶಿಧರ ಡೋಂಗ್ರೆ, ರೋ. ಯಶವಂತ ಪಟವರ್ಧನ್, ಸದಸ್ಯರುಗಳಾದ ನಾರಾಯಣ ಪೈ, ಮಿಥುನ್ ಮಾಡ್ತಾ, ಕಾಲೇಜಿನ ಉಪನ್ಯಾಸಕರುಗಳಾದ ಮಂಗಳಗೌರಿ, ಗಣೇಶ್ ಭಟ್, ಮೋಹನ್ ಭಟ್, ವಿಶಾಲಾಕ್ಷಿ, ಶೀನ ನಾಡೋಳಿ, ತಾರನಾಥ, ಗಣಪತಿ ಭಟ್ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.