ಉಜಿರೆ: ಉಜಿರೆ-ಬೆಳಾಲು-ಕುಪ್ಪೆಟ್ಟಿ ರಸ್ತೆ ಕಾಮಗಾರಿ ಪ್ರಾರಂಭಗೊಂಡಿದ್ದು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಉಜಿರೆಯಿಂದ 24.75ಕಿ.ಮೀ ರಸ್ತೆ ರೂ.28.96ಕೋಟಿ ಕೇಂದ್ರ ಸರಕಾರದ ಗ್ರಾಮೀಣ ಅಭಿವೃದ್ಧಿ ಸಚಿವಾಲಯದ ನೆರವಿನಲ್ಲಿ ನಿರ್ಮಾಣವಾಗಲಿದ್ದು ಉಜಿರೆಯಿಂದ 0.5 ಕಿ.ಮೀ ರಸ್ತೆ ಕಾಂಕ್ರಿಟೀಕರಣ ಮತ್ತು 24.25 ರಸ್ತೆ ಡಾಮರೀಕರಣದೊಂದಿಗೆ ನಿರ್ಮಾಣವಾಗಲಿದ್ದು, ಉಜಿರೆಯಿಂದ ಕಾಂಕ್ರೀಟಿಕರಣ ಕಾಮಗಾರಿ ಪ್ರಾರಂಭವಾಗಿರುವುದರಿಂದ ಉಜಿರೆಯಿಂದ ಓಡಲ, ನಿನ್ನಿಕಲ್ಲು ಪ್ರದೇಶದವರಿಗಾಗಿ ಗಾಂಧಿನಗರ -ಕಿರಿಯಾಡಿ ನಿನ್ನಿಕಲ್ಲು ಮತ್ತು ಚಾವಡಿ-ನಿನ್ನಿಕಲ್ಲು ಬದಲಿ ರಸ್ತೆಯಲ್ಲಿ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ.