ಆರ್‌ಬಿಐ ವಿತ್ತಿಯ ನೀತಿ ಸಮಿತಿ ಸದಸ್ಯರಾಗಿ ಡಾ. ಶಶಾಂಕ ಭಿಡೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮುಂಡಾಜೆ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ( ಆರ್‌ಬಿಐ) ಇದರ ವಿತ್ತೀಯ ನೀತಿ ಸಮಿತಿ ಸದಸ್ಯರಾಗಿ ನಾಲ್ಕು ವರ್ಷದ ಅವಧಿಗೆ ಮುಂಡಾಜೆ ಭಿಡೆ ಮನೆಯ ಅರ್ಥಶಾಸ್ತ್ರಜ್ಞ ಡಾ. ಶಶಾಂಕ ಭಿಡೆ ಅವರು ನೇಮಕಗೊಂಡಿದ್ದು, ಪ್ರಧಾನಿ ನೇತೃತ್ವದ ಕ್ಯಾಬಿನೆಟ್‌ನ ನೇಮಕಾತಿ ಸಮಿತಿಗೆ ನೇಮಕಗೊಂಡ ಮೂವರು ಸದಸ್ಯರ ಹೆಸರಿಗೆ ಅನುಮೋದನೆ ನೀಡಿದೆ.
67 ವರ್ಷ ಪ್ರಾಯದ ಶಶಾಂಕ್ ಭಿಡೆಯವರು ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿ ಆಗಿದ್ದಾಗ ಹಣಕಾಸು ಸಚಿವಾಲಯದಲ್ಲಿ ಸಲಹೆಗಾರಾಗಿದ್ದು, ಅನುಭವವನ್ನು ಪಡೆದದುಕೊಂಡಿದ್ದಾರೆ. ತಿಂಗಳಲ್ಲಿ ಒಂದು ದಿನ ಪ್ರಧಾನ ಮಂತ್ರಿಗಳೊಂದಿಗೆ ಆರ್ಥಿಕ ಸಭೆಯಲ್ಲಿ ಪಾಲ್ಗೊಳ್ಳುವ ಅವಕಾಶ ಭಿಡೆಯವರಿಗೆ ದೊರೆಯಲಿದೆ.

ಹಿನ್ನಲೆ: ಮುಂಡಾಜೆ ಗ್ರಾಮದ ಹಿರಿಯ ಸಹಕಾರಿಯಾಗಿದ್ದ ಹಾಗೂ ಪ್ರತಿಷ್ಠಿತ ಭಿಡೆ ಮನೆಯ ಜಿ.ಎನ್.ಭಿಡೆಯವರ ಪುತ್ರರಾಗಿದ್ದು, ಉಜಿರೆ ರಬ್ಬರ್ ಸೊಸೈಟಿಯ ಅಧ್ಯಕ್ಷ ಶ್ರೀಧರ ಜಿ. ಭಿಡೆಯವರ ಸಹೋದರರಾಗಿರುವ ಡಾ. ಶಶಾಂಕ ಭಿಡೆಯವರು ತಮ್ಮ ಶಾಲಾ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಮಾಡಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಸರಕಾರಿ ಹಿ.ಪ್ರಾ ಶಾಲೆ ಕೊಂಬಿನಡ್ಕದಲ್ಲಿ ಪ್ರಾಥಮಿಕ, ಉಜಿರೆ ಎಸ್‌ಡಿಎಂ ಪ್ರೌಢ ಶಾಲೆಯಲ್ಲಿ ಪ್ರೌಢ ಶಿಕ್ಷಣ, ಬೆಂಗಳೂರಿನ ಕೃಷಿ ವಿಜ್ಞಾನ ವಿ.ವಿಯಲ್ಲಿ ಬಿಎಸ್ಸಿ ಪಡೆದು, ದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಿಂದ ಎಂಎಸ್ಸಿ ಪಡೆದಿದ್ದಾರೆ. ಅಮೇರಿಕದ ಅಯೋವಾ ಸ್ಟೇಟ್ ಯೂನಿವರ್ಸಿಟಿಯಿಂದ ಕೃಷಿ ಅರ್ಥಶಾಸ್ತ್ರದಲ್ಲಿ ಪಿಹೆಚ್‌ಡಿ ಪಡದಿದ್ದಾರೆ.
ಆಸ್ಟ್ರೇಲಿಯಾದ ದಕ್ಷಿಣ ಏಷ್ಯಾ ಸಂಶೋಧನಾ ಕೇಂದ್ರ, ಕ್ಯಾನ್ಬೆರಾದ ರಾಷ್ಟ್ರೀಯ ವಿ.ವಿಯಲ್ಲಿ ಯೋಜನೆಗೆ ಸಂಬಂಧಿಸಿದ ಹುದ್ದೆಯಲ್ಲಿಯೂ ಕೆಲಸ ಮಾಡಿದ್ದಾರೆ. ಟೋಕಿಯೊದ ಇಂಟರ್ ನ್ಯಾಷನಲ್ ಡೆವಲಪ್‌ಮೆಂಟ್‌ಲ್ಲಿನ ಫೌಂಡೇಷನ್ ಫಾರ್ ಅಡ್ವಾನ್ಸ್ಡ್ ಸ್ಟಡೀಸ್‌ನಲ್ಲಿ ಕೆಲ ಕಾಲ ವಿಸಿಟಿಂಗ್ ಫೆಲೋಶಿಫ್ ಆಗಿದ್ದರು.
ಪ್ರಸ್ತುತ ಇವರು ದೆಹಲಿಯ ಎನ್‌ಸಿಎಇಆರ್‌ನಲ್ಲಿ ಹಿರಿಯ ಸಂಶೋಧನಾ ಸಲಹೆಗಾರರಾಗಿದ್ದಾರೆ. ಕೃಷಿ ಅರ್ಥಶಾಸ್ತ್ರಜ್ಞರಾಗಿ ತರಬೇತಿ ಪಡೆದ ಅವರು ಸ್ಥೂಲ ಆರ್ಥಿಕ ಮಾದರಿ, ಮುನ್ಸೂಚನೆ ಮತ್ತು ಬಡತನದಲ್ಲಿ ವಿಶ್ಲೇಷಣೆಯಿಂದ ಹಿಡಿದು ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಕೃಷಿಯವರೆಗೆ ವಿವಿಧ ಅನ್ವಯಿಕ ಅರ್ಥಶಾಸ್ತ್ರ ಕ್ಷೇತ್ರಗಳಲ್ಲಿ ಕೆಲಸ ಮಾಡಿ ಸಾಕಷ್ಟು ವಿತ್ತೀಯ ಜ್ಞಾನದ ಜೊತೆಗೆ ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಫಾರ್ ಸೋಷಿಯಲ್ ಆಂಡ್ ಎಕನಾಮಿಕ್ ಚೇಂಜ್‌ನಲ್ಲಿ ಆರ್‌ಬಿಐ ಘಟಕದ ಪ್ರಾಧ್ಯಾಪಕರಾಗಿ ಮತ್ತು ಮುಖ್ಯಸ್ಥರಾಗಿ ಕೆಲಸ ಮಾಡಿದಂತಹ ಅನುಭವ ಭಿಡೆಯವರಿಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.