ರಾಜ್ಯ ಸರಕಾರ ಆಡಳಿತದಲ್ಲಿ ವಿಫಲ: ಹರೀಶ್ ಕುಮಾರ್

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕೇಂದ್ರ ಸರಕಾರದಿಂದ ರಾಜ್ಯಕ್ಕೆ ರೂ.42 ಸಾವಿರ ಕೋಟಿ ಜಿಎಸ್‌ಟಿಯ ಹಣ ಬರಲು ಬಾಕಿ ಇದ್ದು, ಇದನ್ನು ಕೇಂದ್ರ ಸರಕಾರ ಅನ್ಯ ಉದ್ದೇಶಕ್ಕೆ ಬಳಕೆ ಮಾಡಿರುವುದು ಗೊತ್ತಾಗಿದೆ. ಈಗ ರಾಜ್ಯ ಸರಕಾರಗಳು ಸಾಲ ತೆಗೆದುಕೊಳ್ಳಲು ಹೇಳಿದಂತೆ, ಯಡಿಯೂರಪ್ಪ ಸರಕಾರ 14 ತಿಂಗಳಲ್ಲಿ 1.17 ಸಾವಿರ ಕೋಟಿ ಸಾಲ ಮಾಡಿದೆ. ಎಂದು ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಆರೋಪಿಸಿದರು. ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಉತ್ತರ ಪ್ರದೇಶದಲ್ಲಿ ದಲಿತ ಮಹಿಳೆಯನ್ನು ದೌರ್ಜನ್ಯ ನಡೆಸಿ ಕೊಲೆ ಮಾಡಲಾಗಿದೆ. ಮಹಿಳೆಯ ಹೆತ್ತವರನ್ನು ಗೃಹಬಂಧನದಲ್ಲಿರಿಸಿ ಶವವನ್ನು ದಹನ ಮಾಡಿದರು. ಪ್ರಕರಣವನ್ನು ಮುಚ್ಚಿ ಹಾಕುವ ಯತ್ನವಾಗಿದೆ. ಅವರ ಮನೆಯವರಿಗೆ ಸಂತ್ವಾನ ಹೇಳಲು ಬಂದ ಪಕ್ಷದ ರಾಷ್ಟ್ರಧ್ಯಕ್ಷ ರಾಹುಲ್‌ಗಾಂಧಿ ಮತ್ತು ಪ್ರಿಯಾಂಕ ಗಾಂಧಿಯನ್ನು ತಡೆಯುವ ಕೆಲಸವಾಗಿದೆ. ಮೈಮೇಲೆ ಕೈ ಮಾಡುವ ಕೃತ್ಯವೂ ನಡೆದಿದೆ ಇದು ಭಾರತೀಯ ಸಂಸ್ಕೃತಿಗೆ ಕಪ್ಪು ಚುಕ್ಕೆ ಎಂದರು.
ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆಸಿ ಮನೆ ಮೇಲೆ ಸಿಬಿಐ ದಾಳಿ ರಾಜಕೀಯ ಪ್ರೇರಿತವಾಗಿದೆ. ಮುಂದೆ ನಡೆಯಲಿರುವ ಚುನಾವಣೆಯ ದೃಷ್ಟಿಯಿಂದ ಇದನ್ನು ಮಾಡಲಾಗಿದೆ ಎಂದು ಆರೋಪಿಸಿದ ಹರೀಶ್ ಕುಮಾರ್ ಅವರು ಯಡಿಯೂರಪ್ಪರ ಪುತ್ರ ಮತ್ತು ಮೊಮ್ಮಗ ಆರ್‌ಟಿಎಸ್ ಮೂಲಕ 7 ಕೋಟಿ ಪಡೆದಿರುವ ವಿಷಯ ಮಾಧ್ಯಮಗಳಲ್ಲಿ ಬಂದಿದ್ದು, ಇದನ್ನು ತನಿಖೆ ಮಾಡುವುದಿಲ್ಲ ಎಂದು ಸರಕಾರ ಹೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.