ಬೆಳ್ತಂಗಡಿ ಯುವ ಮರಾಟಿ‌ ಸಂಘದಿಂದ ಸಹಾಯ ಹಸ್ತ, ಆರೋಗ್ಯ ನಿಧಿಯಿಂದ 10 ಸಾವಿರ ‌ವಿತರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ:ತಾಲೂಕು ಯುವ ಮರಾಟಿ ಸೇವಾ ಸಂಘದ ವತಿಯಿಂದ ಅಧ್ಯಕ್ಷರಾದ ಸಂತೋಷ್ ಕುಮಾರ್ ಲಾಯಿಲಾ ಮಾರ್ಗದರ್ಶನದಲ್ಲಿ ಆರೋಗ್ಯ ನಿಧಿಯ ಚೆಕ್ ವಿತರಿಸಲಾಯಿತು. ಅನಾರೋಗ್ಯದಿಂದಿರುವ ಸಂಘದ ಉಪಾಧ್ಯಕ್ಷ ಹಾಗೂ ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ ಹರೀಶ್ ನಾಯ್ಕ್ ಅವರ ಅಡ್ಯನಡ್ಕದ ಅವರ ಸ್ವಗೃಹಕ್ಕೆ ತೆರಳಿ ಮರಾಟಿ ಆರೋಗ್ಯ ನಿಧಿ ರೂ. 10,000ನ ಚೆಕ್ಕನ್ನು ನೀಡಿ, ಶೀಘ್ರ ಚೇತರಿಕೆಗೆ ಹಾರೈಸಲಾಯಿತು.


ಹರೀಶ್ ಅವರು ಮೇದೋಜೀರಕ (ಲಿವರ್) ಗ್ರಂಥಿ ಸಮಸ್ಯೆಯಿಂದ ಬಳಲುತ್ತಿದ್ದು, ಮಂಗಳೂರಿನ ‌ಖಾಸಗಿ‌ ಆಸ್ಪತ್ರೆಯಲ್ಲಿ ‌ಚಿಕಿತ್ಸೆ ಪಡೆದಿದ್ದರು. ಇದೀಗ ಬಿಡುಗಡೆ ನಿವಾಸಕ್ಕೆ ಆಗಮಿಸಿದರೂ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಊರುಗೋಲು ಸಹಾಯದಿಂದ ನಡೆದಾಡುವ ಪರಿಸ್ಥಿತಿಗೆ ತಲುಪಿದ್ದಾರೆ. ಚಿಕಿತ್ಸೆಗೂ ಅಪಾರ ಹಣ ವೆಚ್ಚ ಮಾಡುತ್ತಿದ್ದಾರೆ. ಈಗಾಗಲೇ ಅವರ ದೇಹದ ತೂಕ 88.50ಕೆ.ಜಿ.ಯಿಂದ 55 ಕೆ.ಜಿ.ಗೆ ಇಳಿದಿದೆ. ತೀವ್ರ ಆರ್ಥಿಕ ಸಂಕಷ್ಟ ಎದುರಿಸಿದ ಇವರಿಗೆ ಸಂಘದಿಂದ ಸಹಾಯ ಹಸ್ತ ಚಾಚಲಾಗಿದೆ.
ಸಂಘದ ಪರವಾಗಿ ಉಪಾಧ್ಯಕ್ಷರಾದ ವಸಂತ ನಾಯ್ಕ , ಕ್ರೀಡಾಕಾರ್ಯದರ್ಶಿ ಹೆಚ್.ಎಲ್. ಸತೀಶ್, ಕಾರ್ಯದರ್ಶಿ ಪ್ರಸಾದ್ ಕುಮಾರ್, ಕೋಶಾಧಿಕಾರಿ ಪ್ರಜ್ವಲ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾದ ಶರತ್ ಕಣಿಯೂರು ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.