ಬೆಳಾಲಿನಲ್ಲಿ ಕೃಷಿ ಉಪಕರಣಗಳ ಪ್ರದರ್ಶನ, ಮಾಹಿತಿ ಹಾಗೂ ಪ್ರಾತ್ಯಕ್ಷತೆ ಕಾರ್ಯಕ್ರಮ

ಬೆಳಾಲು: ಪುತ್ತೂರಿನ ಪ್ರಖ್ಯಾತ ಕೃಷಿ ಉಪಕರಣಗಳ ಮಾರಾಟಗಾರರಾದ ‘ಸಾಯ ಎಂಟರ್‌ಪ್ರೈಸಸ್ ರವರಿಂದ ಅ.6ರಂದು ಬೆಳಾಲಿನ ಏರ್ದೋಟ್ಟು ಮೋಹನ ಗೌಡರ ಎನ್.ಜೆ. ಅಕ್ಕಿ ಮಿಲ್ಲ್‌ನ ವಠಾರದಲ್ಲಿ ಕೃಷಿ ಉಪಕರಣಗಳ ಪ್ರದರ್ಶನ, ಮಾಹಿತಿ ಹಾಗೂ ಪ್ರಾತ್ಯಕ್ಷತೆ ಕಾರ್ಯಕ್ರಮ ನಡೆಯಿತು.
ಕೃಷಿ ಮತ್ತು ತೋಟಗಾರಿಕೆಯಲ್ಲಿ ಬಳಸುವ ಹೆಚ್ಚಿನ ಉಪಕರಣಗಳ ಬಗ್ಗೆ ಮಾಹಿತಿ ನೀಡಿ, ತೋಟಗಾರಿಕೆ ಇಲಾಖೆಯಿಂದ ಸಿಗುವ ಸಬ್ಸಿಡಿಯ ಕುರಿತು ತಿಳಿಸಿದರು. ಅಡಿಕೆ ಸುಲಿಯುವ ಯಂತ್ರಗಳು, ಭಾರ ಸಾಗಿಸಲು ಪೆಟ್ರೋಲ್ ಚಾಲಿತ ಮೋಟೋಕಾರ್ಟ್ ಗಳು, ೪೦ರಿಂದ ೬೦ಅಡಿ ಎತ್ತರ ಔಷಧಿ ಸಿಂಪಡಿಸುವ ದೋಂಟಿಗಳು, ಮರ ಹತ್ತುವ ಬೈಕ್, ಏಣಿಗಳು, ಚಾಫ್ ಕಟರ್ ಮುಂತಾದ ಯಂತ್ರಗಳ ಪ್ರದರ್ಶನ ನಡೆಯಿತು.
ಇದರೊಂದಿಗೆ ಪ್ರಸಕ್ತ ರೈತರು ಕಾಡು ಪ್ರಾಣಿಗಳ ಉಪಠಳದಿಂದ ಬೇಸತ್ತು ಹೋಗಿದ್ದು, ಅವುಗಳನ್ನು ಹೆದರಿಸಿ ಓಡಿಸುವ ನಕಲಿ ಕೋವಿಗಳ ಪ್ರದರ್ಶನ ಮತ್ತು ಸಿಡಿಸುವಿಕೆ ರೈತರ ಮತ್ತು ಸೇರಿದವರ ಮನಸ್ಸು ಗೆದ್ದಿತು. ವೇಣೂರಿನ ಜಾನ್ ಡಿಸೋಜ ಮತ್ತು ಗೋಪಾಲ ಆಚಾರಿ ಇವರು ತಾವು ತಯಾರಿಸುವ ನಕಲಿ ಕೋವಿಗಳನ್ನು ಪ್ರದರ್ಶಿಸಿ, ಅವುಗಳನ್ನು ಸಿಡಿಸಿ ತೋರಿಸಿದರು.
ಕಾರ್ಯಕ್ರಮದಲ್ಲಿ ಬೆಳಾಲು, ಬಂದಾರು, ಉಪ್ಪಿನಂಗಡಿ, ಕರಾಯ, ಮುಂಡಾಜೆ, ಧರ್ಮಸ್ಥಳ, ಉಜಿರೆಯ ರೈತರು ಭಾಗವಹಿಸಿದ್ದರು.
ಕೃಷಿ ಇಲಾಖೆಯ ಅಧಿಕಾರಿ ಚಿದಾನಂದ ಹೂಗಾರ್, ರಾಜ್ಯ ಕೃಷಿ ಪಂಡಿತ ಪ್ರಶಸ್ತಿ ವಿಜೇತ ಪ್ರಭಾಕರ ಮಯ್ಯ, ಆದಿಶಕ್ತಿ ಬಯೋ ಸಂಸ್ಥೆಯ ನಿರ್ದೇಶಕ ರೂಪೇಶ್ ಧರ್ಮಸ್ಥಳ, ಮಾಜಿ ತಾ.ಪಂ. ಅಧ್ಯಕ್ಷ ಜತ್ತಣ್ಣ ಗೌಡ, ಮಾಜಿ ಗ್ರಾ.ಪಂ. ಅಧ್ಯಕ್ಷ ಮೋಹನ್ ಗೌಡ, ಲಕ್ಷ್ಮಣ ಗೌಡ, ದಿನೇಶ್ ಕೋಟ್ಯಾನ್,’ಸಾಯ ಎಂಟರ್ಪ್ರೈಸಸ್ನ ಮಹೇಶ್ ಮತ್ತು ತಂಡದವರು ಹಾಗೂ ಬೆಳಾಲಿನ ಸಂಘ ಸಂಸ್ಥೆಗಳು ಭಾಗವಹಿಸಿದ್ದರು.
ಬೆಳಾಲು ಸಹಕಾರಿ ಸಂಘದ ನಿರ್ದೇಶಕ ಸುಲೈಮಾನ್ ಭೀಮಂಡೆ ಸ್ವಾಗತಿಸಿ, ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.