ಮರೋಡಿ: ರೂ. 1.27 ಕೋಟಿ ಅನುದಾನದ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗೆ ಶಿಲಾನ್ಯಾಸ

ಮರೋಡಿ: ಮರೋಡಿ ಗ್ರಾಮದಲ್ಲಿ ರೂ. 1.27 ಕೋಟಿ ಅನುದಾನದಲ್ಲಿ ವಿವಿಧ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮ ಅ.6ರಂದು ಜರುಗಿತು. ಶಾಸಕ ಹರೀಶ್ ಪೂಂಜ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಪ್ರಮುಖರಾದ ರತ್ನಾಕರ ಬುಣ್ಣಾನ್, ಬಾಲಕೃಷ್ಣ ಬಂಗೇರ ಮರೋಡಿ, ರಾಮ್‌ಪ್ರಸಾದ್ ಮರೋಡಿ, ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಶುಭರಾಜ್, ಬೂತ್ ಸಮಿತಿ ಅಧ್ಯಕ್ಷರುಗಳಾದ ಅಶೋಕ್ ಪೂಜಾರಿ, ಗೋವಿಂದ ಭಟ್, ಮರೋಡಿ. ಪ್ರಮುಖರಾದ ವಿಜಯ ಆರಿಗ, ಪದ್ಮರಾಜ ಶೆಟ್ಟಿ, ಜಯಕುಮಾರ್ ಕೆ, ರವಿರಾಜ ಬಲ್ಲಾಳ್, ಡಾ.ಆಶೀರ್ವಾದ್ ಅಂಡಿಜೆ ಗ್ರಾ.ಪಂ ಮಾಜಿ ಅಧ್ಯಕ್ಷ ಮೋಹನ ಅಂಡಿಂಜೆ, ಯಶೋಧರ ಬಂಗೇರ ಮರೋಡಿ, ನವೀನ್ ಕೋಟ್ಯಾನ್ ಮರೋಡಿ, ಮರೋಡಿ ಗ್ರಾ.ಪಂ ಸದಸ್ಯರು ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶಿಲಾನ್ಯಾಸಗೊಂಡ ಕಾಮಗಾರಿಗಳ ವಿವರ:

ನೀರಲ್ಕೆಯಿಂದ – ಕಲ್ಲೊಟ್ಟಬೈಲು ರಸ್ತೆ ಕಾಂಕ್ರೀಟಿಕರಣ – 10 ಲಕ್ಷ.
ಪಾಣಾಲದಿಂದ – ಉಟ್ಟೂರು ರಸ್ತೆ ಕಾಂಕ್ರೀಟಿಕರಣ – 10 ಲಕ್ಷ.
ಮಿತ್ತಬೆಟ್ಟುವಿನಿಂದ – ಕಾಯರ್ ಬೈಲುವರೆಗೆ ರಸ್ತೆ ಕಾಂಕ್ರೀಟಿಕರಣ – 20 ಲಕ್ಷ.
ರಾಗಿಮೇಳು – ಕಾಯರ್ ಬೈಲುವರೆಗೆ ರಸ್ತೆ ಕಾಂಕ್ರೀಟಿಕರಣ – 35 ಲಕ್ಷ.
ಮಹಮ್ಮಾಯಿ ಕಟ್ಟೆ ನಡ್ತಿಕಲ್ಲು ಹೈ- ಮಸ್ಟ್ ದ್ವೀಪ ಉದ್ಘಾಟನೆ -1.25 ಲಕ್ಷ
 ಅರುಣೋದಯ ಯುವಕ ಮಂಡಲ ಹೈಮಾಸ್ಟ್ ದೀಪ ಘಟನೆ -1.25ಲಕ್ಷ
ಪಲಾರ ಗೋಳಿ ಹೈಮಾಸ್ಟ್ ದೀಪ ಉದ್ಘಾಟನೆ – 1.25ಲಕ್ಷ
ಪಲಾರಗೋಳಿ ಮೈದಾನ ಹೈಮಾಸ್ಟ್ ದೀಪ ಉದ್ಘಾಟನೆ ಕಾರ್ಯಕ್ರಮ- 1.25 ಲಕ್ಷ
ಉರ್ಬೆಂದಗುಡ್ಡೆ ಹೈಮಾಸ್ಟ್ ದೀಪ ಉದ್ಘಾಟನೆ – 1.25 ಲಕ್ಷ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.