ಉಜಿರೆ: ಉಜಿರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸೇವಾಸಂಘದ ನಗರ ಶಾಖಾ ಕಚೇರಿ ಅ.1ರಂದು ಉಜಿರೆ ಮಾರ್ಕೆಟ್ ಎದುರಿನ ನ್ಯಾಷನಲ್ ಕಾಂಪ್ಲೆಕ್ಸ್ನಲ್ಲಿ ಶುಭಾರಂಭಗೊಂಡಿತು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶರತ್ಕೃಷ್ಣ ಪಡ್ವೆಟ್ನಾಯರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.
ಉಜಿರೆ ಪ್ರಾ.ಕೃ. ಪತ್ತಿನ ಸಹಕಾರಿ ಸೇವಾ ಸಂಘದ ಅಧ್ಯಕ್ಷ ಇಚ್ಚಿಲ ಸುಂದರ ಗೌಡ, ಉಪಾಧ್ಯಕ್ಷೆ ಪ್ರೇಮಾ ನಿರ್ದೇಶಕಿ ಜಿ.ಪಂ. ಸದಸ್ಯೆ ಸೌಮ್ಯಲತಾ ಎಂ., ನಿರ್ದೇಶಕರುಗಳಾದ ಶ್ರೀನಿವಾಸ ಗೌಡ, ಅಬ್ದುಲ್ ರಹಿಮಾನ್ ಬಿ.ಎಂ., ಮೋಹನದಾಸ ಎಂ.ಬಿ, ಅಶ್ವತ್ ಇ.ಎಸ್, ಸದಾಶಿವ, ಅರುಣಕುಮಾರ್, ಸಾಧು ಮೇರ, ಅಣ್ಣುನಾಯ್ಕ, ಪುಷ್ಪಾವತಿ ಆರ್. ಶೆಟ್ಟಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಚಂದ್ರೇಶ್ ಶೆಟ್ಟಿ, ಸಿಬ್ಬಂದಿ ವರ್ಗದವರು, ಸದಸ್ಯರು ಉಪಸ್ಥಿತರಿದ್ದರು.