ಪುಂಜಾಲಕಟ್ಟೆ: ಗಾಂಧಿ-ಶಾಸ್ತ್ರಿ ನಮನ ಹಾಗೂ ಸದೃಢ ಭಾರತ ಸಪ್ತಾಹ ಸಮಾರೋಪ

ಪುಂಜಾಲಕಟ್ಟೆ: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ, ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2 ಇದರ ಆಶ್ರಯದಲ್ಲಿ ಗಾಂಧಿ & ಶಾಸ್ತ್ರಿ ನಮನ ಹಾಗೂ ಸದೃಢ ಭಾರತ ಸಪ್ತಾಹ ಕಾರ್ಯಕ್ರಮವನ್ನು ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಬೆಳ್ತಂಗಡಿ ಸರಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಆನಂದ್ ಡಿ ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ಚಿಂತನೆಯ ಪ್ರಸ್ತುತತೆಯನ್ನು ಹಲವಾರು ನಿದರ್ಶನಗಳ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಅಹಿಂಸೆ ಮಾನವತಾವಾದ ದೇಶಾಭಿಮಾನದ ಬಗ್ಗೆ ಮಾತನಾಡಿದರು. ಕಾಲೇಜು ಪ್ರಾಂಶುಪಾಲ ಪ್ರೊ.ಗಣಪತಿ ಭಟ್ ಕುಳಮರ್ವ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಚಾಲಕ ರವಿಶಂಕರ್ ಬಿ , ಯೋಜನಾಧಿಕಾರಿ ಸಂತೋಷ್ ಪ್ರಭು ಮತ್ತು ರಾಜೇಶ್ವರಿ ಎಚ್‌ಎಸ್, ಉಪನ್ಯಾಸಕ ವೃಂದ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಚೇತನ್ ಸ್ವಾಗತಿಸಿ, ಮಲ್ಲಿಕಾ ಅತಿಥಿಗಳನ್ನು ಪರಿಚಯಿಸಿ, ಕೃಪಾ ಕಾರ್ಯಕ್ರಮ ನಿರೂಪಿಸಿ, ಸ್ಮಿತಾ ವಂದಿಸಿದರು.

ಎಲ್ಲಾ ಸ್ವಯಂ ಸೇವಕರೊಂದಿಗೆ ಅಧ್ಯಾಪಕವೃಂದದವರು ‘ಸದೃಢ ಭಾರತ ನಡಿಗೆ ‘ ಕಾರ್ಯಕ್ರಮದಲ್ಲಿ 2 ಕಿ.ಮೀ. ದೂರ ನಡಿಗೆಯ ಮೂಲಕ ಭಾಗವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.