ಆರೋಗ್ಯ ಇಲಾಖಾ ಗುತ್ತಿಗೆ & ಹೊರಗುತ್ತಿಗೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ

ಬೆಳ್ತಂಗಡಿ : ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘ, ಸಂಯೋಜಿತ ಭಾರತೀಯ ಮಜ್ದೂರ್ ಸಂಘ ಇದರ ವತಿಯಿಂದ ಸಮಾನ ಕೆಲಸಕ್ಕೆ ಸಮಾನ ವೇತನ, ಸೇವಾ ಭದ್ರತೆ ಮತ್ತು ಇತರ ಬೇಡಿಕೆಗಳನ್ನು ಆಗ್ರಹಿಸಿ ಇಂದು(ಅ.3) ಅನಿರ್ಧಿಷ್ಟಾವಧಿ ಮುಷ್ಕರ ನಡೆಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಗುತ್ತಿಗೆ ನೌಕರರ ಸಂಘದ ಸಂಚಾಲಕ ಅಜೇಯ್ ಮಾತನಾಡಿ, ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಕಳೆದ 15 ವರ್ಷಗಳಿಂದ ಕನಿಷ ವೇತನಕ್ಕೆ ಯಾವುದೇ ಇತರ ಸೌಲಭ್ಯ ವಿಲ್ಲದೆ ದುಡಿಯುತ್ತಿದ್ದು, ಇತ್ತೀಚೆಗೆ ಕೋವಿಡ್ ಸಮಯದಲ್ಲೂ ಪ್ರಾಣದ ಹಂಗು ತೊರೆದು ಕೆಲಸ ಮಾಡಿದರೂ ಸರಕಾರ ನಮ್ಮ ಬೇಡಿಕೆಗಳ ಬಗ್ಗೆ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ ಎಂದು ಆರೋಪಿಸಿ, ಕೂಡಲೇ ಸರಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ  ಬೆಳ್ತಂಗಡಿ ತಹಶೀಲ್ದಾರರ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಗೌರವಾಧ್ಯಕ್ಷ ಡಾ ಸುಮನಂದ ಕುಮಾರ್, ಸಂಚಾಲಕರಾದ ಮಹಂತೇಶ್, ಹಮೀದ್, ಆಶಾ ಮೆಂಟರ್ ಹರಿಣಿ, ಗ್ರೂಪ್ ಡಿ’ನೌಕರ ಉಮೇಶ್ ಹಾಗೂ ನೌಕರರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.