ಕೊಕ್ಕಡ :ಭಾರತೀಯ ಜನತಾ ಪಾರ್ಟಿ ಕೊಕ್ಕಡ 239ನೇ ಬೂತ್ ವತಿಯಿಂದ ಕಾರ್ಯಕರ್ತ ಲಿಂಗಪ್ಪ ಗೌಡ ಪುತ್ಯೇ ಯವರ ಮನೆಯಲ್ಲಿ ಗಾಂಧಿ ಜಯಂತಿ ಆಚರಣೆ ಮಾಡಲಾಯಿತು. ಬಳಿಕ ಕೊಕ್ಕಡ ಕಟ್ಟೆ ಬಳಿಯಿಂದ ಪುತ್ಯೇ ಸೇತುವೆ ವರೆಗೆ ಮಾರ್ಗದ ಬದಿಯ ಗಿಡ /ಕಳೆ ಗಳನ್ನು ತೆಗೆಯಲಾಯಿತು ಮತ್ತು ಮಾರ್ಗದ ಬದಿ ಪ್ಲಾಸ್ಟಿಕ್ ಇನ್ನಿತರ ತ್ಯಾಜ್ಯಗಳನ್ನು ತೆಗೆದು ಸ್ವಚ್ಛ ಗೊಳಿಸಲಾಯಿತು.
ಈ ಸಂದರ್ಭ ಬಿಜೆಪಿ ಮಹಾ ಶಕ್ತಿ ಕೇಂದ್ರ ಧರ್ಮಸ್ಥಳ ಅಧ್ಯಕ್ಷ ಯೋಗೀಶ್ ಅಲಂಬಿಲ, ಕೊಕ್ಕಡ ಶಕ್ತಿ ಕೇಂದ್ರ ಪ್ರಮುಖ್ ಜನಾರ್ದನ, ಬೂತು ಸಮಿತಿ ಅಧ್ಯಕ್ಷ ವಿನಯ್ ಹಾರ,ಕಾರ್ಯದರ್ಶಿ ಕಿಶೋರ್ ಪುತ್ಯೇ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು