ಶಿಬಾಜೆ: ಶಿಬಾಜೆ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಜೊತೆ ಸಂವಾದ ಕಾರ್ಯಕ್ರಮ ಅ.1ರಂದು ನಡೆಯಿತು. ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಕಾರ್ಯಕರ್ತರು ಪ್ರತಾಪ್ ಸಿಂಹ ನಾಯಕ್ ರವರನ್ನು ಸನ್ಮಾನಿಸಿದರು. ಧರ್ಮಸ್ಥಳ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಯೋಗೀಶ್ ಅಲಂಬಿಲ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೊರಗಪ್ಪ ನಾಯ್ಕ, ಹತ್ಯಡ್ಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ನಾಯ್ಕ್ ಬರ್ಗುಳ, ಗ್ರಾ.ಪಂ.ಮಾಜಿ ಅಧ್ಯಕ್ಷೆ ಸುಶೀಲ, ಪುರಂದರ್ ಭಟ್ ಉಪಸ್ಥಿತರಿದ್ದರು.
ಜಯರಾಮ ಶಿಬಾಜೆ ಪ್ರಾರ್ಥಿಸಿ, ಶಿಬಾಜೆ ಶಕ್ತಿ ಕೇಂದ್ರ ಪ್ರಮುಖ್ ರತೀಶ್ ಗೌಡ ಬೇಂಗಳ ಸ್ವಾಗತಿಸಿ, ಗಿರೀಶ್ ಭಟ್ ಕಾರ್ಯಕ್ರಮ ನಿರೂಪಿಸಿ, ರಮೇಶ್ ಗೌಡ ವಂದಿಸಿದರು.