ಧರ್ಮಸ್ಥಳ: ಗಾಂಧಿ ಜಯಂತಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಜನ್ಮದಿನದ ಪ್ರಯುಕ್ತ ಅ.2 ರಂದು ಧರ್ಮಸ್ಥಳದ ಶ್ರೀ ಧ.ಮಂ.ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶೇಷ ಕಾರ್ಯಕ್ರಮ ಜರುಗಿತು. ಮುಖ್ಯ ಅತಿಥಿ ಉಜಿರೆ ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ಶಿವರಾಜ್ ದೀಪ ಬೆಳಗಿದರು.
ಈ ಸಂದರ್ಭದಲ್ಲಿ ಮಕ್ಕಳಿಗೆ “ಮಾನವೀಯ ಮೌಲ್ಯಗಳನ್ನು ಸಾರುವ ಎಲ್ಲರ ನೋವನು ಬಲ್ಲವನಾದರೆ” ಹಾಡನ್ನು ಮತ್ತು ಗಾಂಧೀಜಿಯವರ ಚಿತ್ರ ಬಿಡಿಸಲು ಸಂಬಂಧಿಸಿದ ವಿಡಿಯೋ ಹಾಗೂ ೫ರಿಂದ 10ನೇ ತರಗತಿಯ ಮಕ್ಕಳಿಗೆ ಗಾಂಧೀಜಿಯ ಕುರಿತಾದ ರಸಪ್ರಶ್ನೆ ಕಳುಹಿಸಿಕೊಡಲಾಯಿತು. . ಸಹಶಿಕ್ಷಕಿ ರಮಾ ರಾಜೇಶ್ ಸ್ವಾಗತಿಸಿದರು. ಶಾಲಾ ಶಿಕ್ಷಕ – ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.