ಬಿಜೆಪಿ ಬೆಳ್ತಂಗಡಿ ಮಂಡಲದ ಪದಾಧಿಕಾರಿಗಳು,ಮಹಾಶಕ್ತಿ ಕೇಂದ್ರ ಹಾಗೂ ಶಕ್ತಿಕೇಂದ್ರ ಸಭೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿಯ ಮಂಡಲ ಪದಾಧಿಕಾರಿಗಳು, ಮಹಾಶಕ್ತಿ ಕೇಂದ್ರ ಮತ್ತು ಶಕ್ತಿಕೇಂದ್ರಗಳ ಸಭೆ ಒ.1 ರಂದು ಬೆಳ್ತಂಗಡಿ ಮಂಜುನಾಥ ಕಲಾಭವನದ ಪಿನಾಕಿ ಯಲ್ಲಿ ನಡೆಯಿತು.


ಭಾರತೀಯ ಜನತಾ ಪಾರ್ಟಿಯ ತತ್ವ ಸಿದ್ದಾಂತ,ರಾಷ್ಟ್ರಭಕ್ತಿ ಹಾಗೂ ಕಾರ್ಯವೈಖರಿಯನ್ನು ಕಂಡು ತಮ್ಮ ಸ್ವ ಇಚ್ಛೆಯಿಂದ ಕಳೆಂಜ ಗ್ರಾಮದ ಕಾಂಗ್ರೆಸಿನ ಗ್ರಾ.ಪಂ. ಮಾಜಿ ಸದಸ್ಯರಾದ ಲಕ್ಷ್ಮಣ ಗೌಡ ಬಲ್ಕಾಜೆ, ಗುರುವ ನೇಲ್ಯಪಳಿಕೆ, ಕಾಂಗ್ರೇಸ್ ಬೆಂಬಲಿತ ಸಹಕಾರಿ ಬ್ಯಾಂಕಿನ ನಿರ್ದೇಶ ರಾಜೇಶ್ ನೇಲ್ಯಪಳಿಕೆ ಹಾಗೂ ಕಾಂಗ್ರೇಸ್ ಕಾರ್ಯಕರ್ತರಾದ ಡೊಂಬಯ್ಯ ಪೂಜಾರಿ ಚಾಕೊಟೆತ್ತಡಿ, ಅಣ್ಣಿ ಗೌಡ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು. ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಬಿಜೆಪಿ ಧ್ವಜ ನೀಡುವ ಮೂಲಕ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ಜಿಲ್ಲಾ ಉಪಾಧ್ಯಕ್ಷ ಕೊರಗಪ್ಪ ನಾಯ್ಕ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ್ ರಾವ್, ಸುಬ್ರಹ್ಮಣ್ಯ ಗೌಡ, ತಾಪಂ ಸದಸ್ಯೆ ಸುಶೀಲ, ಕಳೆಂಜ ಗ್ರಾ.ಪಂ.ಮಾಜಿ ಅಧ್ಯಕ್ಷೆ ಶಾರದಾ, ಶಕ್ತಿಕೇಂದ್ರ ಪ್ರಮುಖ್ ಹರೀಶ್ ಕೆ.ಬಿ., ನಿಡ್ಲೆ ಸಿಎ ಬ್ಯಾಂಕ್ ಅಧ್ಯಕ್ಷ ರಮೇಶ್ ರಾವ್, ಧನಂಜಯ ಗೌಡ, ಜಯಚಂದ್ರ, ಗಣೇಶ್ ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.