ನಾರಾವಿ ಕಾಲೇಜು: ಸ್ಥಾಪಕ ಪ್ರಾಚಾರ್ಯರ ಶ್ರದ್ಧಾಂಜಲಿ ಸಭೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ವೇಣೂರು: ನಾರಾವಿ ಸಂತ ಅಂತೋನಿ ಕಾಲೇಜಿನ ಸ್ಥಾಪಕ ಪ್ರಾಚಾರ್ಯ ದಿ| ವಂ| ಎಡ್ವಿನ್ ಮಸ್ಕರೇನ್ಹಸ್‌ರವರು ಸೆ.29ರಂದು ನಿಧನ ಹೊಂದಿದ್ದು, ಅವರ ಶ್ರದ್ಧಾಂಜಲಿ ಸಭೆಯು ಕಾಲೇಜು ಸಭಾಂಗಣದಲ್ಲಿ ಜರಗಿತು.
ಫಾ| ಎಡ್ವಿನ್ ಮಸ್ಕರೇನ್ಹಸ್‌ರವರು ಕಾಲೇಜಿಗೆ ಹಾಗೂ ಚರ್ಚ್‌ಗೆ ನೀಡಿದ 10 ವರ್ಷಗಳ ಸುದೀರ್ಘ ಸೇವೆಯನ್ನು ಸಂಚಾಲಕ ವಂ| ಫಾ| ಸೈಮನ್ ಡಿಸೋಜ ಸ್ಮರಿಸಿದರು. ಹಳೆ ವಿದ್ಯಾರ್ಥಿ ಅಶ್ವಥ್ ಹೆಗ್ಡೆ ಮಾತನಾಡಿ, ದಿ| ಫಾ| ಎಡ್ವಿನ್‌ರವರ ಜೀವನ ಹಾಗೂ ಅವರೊಡನೆ ಇದ್ದ ಒಡನಾಟವನ್ನು ಮೆಲುಕು ಹಾಕಿದರು. ನಾರಾವಿ ಪ್ರಾ.ಆ. ಕೇಂದ್ರದ ವೈದ್ಯಾಧಿಕಾರಿ, ಹಳೆ ವಿದ್ಯಾರ್ಥಿನಿ ಡಾ| ದೀಕ್ಷಿತಾ, ಉಪನ್ಯಾಸಕ ರಿಚ್ಚಾರ್ಡ್ ಮೋರಾಸ್ ಉಪಸ್ಥಿತರಿದ್ದರು. ಸಂಸ್ಥೆಯ ಶಿಕ್ಷಕ ಹಾಗೂ ಶಿಕ್ಷಕೇತರ ವರ್ಗ, ಹಳೆ ವಿದ್ಯಾರ್ಥಿಗಳು ಹಾಗೂ ಚರ್ಚ್ ಬಾಂಧವರು ಉಪಸ್ಥಿತರಿದ್ದರು.
ಪ್ರಾಚಾರ್ಯ ವಂ| ಫಾ| ಅರುಣ್ ವಿಲ್ಸನ್ ಲೋಬೊ ಸ್ವಾಗತಿಸಿ, ಉಪ ಪ್ರಾಚಾರ್ಯ ಸಂತೋಷ್ ಸಲ್ಡಾನ್ಹ ವಂದಿಸಿದರು. ಉಪನ್ಯಾಸಕಿ ಜ್ಯೋತಿ ಹೆಗ್ಡೆ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.