ಬೆಳ್ತಂಗಡಿ: ಬೆಳ್ತಂಗಡಿ ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದಿಂದ ಪ್ರಥಮ ಬಾರಿಗೆ 16 ಟನ್ ರಬ್ಬರನ್ನು ಕೊಂಕಣ್ ರೈಲ್ವೆ ವೇಗನ್ನಲ್ಲಿ ಬಾಂಬೆಗೆ ಕಳುಹಿಸುವ ಕಾರ್ಯಕ್ರಮಕ್ಕೆ ಸೆ.29 ರಂದು ಲಾಲ ರಬ್ಬರ್ ಫ್ಯಾಕ್ಟರಿಯಲ್ಲಿ ಸಂಘದ ಅಧ್ಯಕ್ಷ ಶ್ರೀಧರ ಜಿ. ಭಿಡೆ ಚಾಲನೆ ನೀಡಿದರು.
ಇದುವರೆಗೆ ಬಾಂಬೆಗೆ ರಸ್ತೆ ಮೂಲಕ ಟ್ರಕ್ನಲ್ಲಿ ರಬ್ಬರನ್ನು ಸಾಗಾಟ ಮಾಡಲಾಗುತ್ತಿತ್ತು. ಪ್ರಥಮ ಬಾರಿಗೆ ಕೊಂಕಣ ರೈಲ್ವೆಯಲ್ಲಿ ಇದನ್ನು ಕಳುಹಿಸಲಾಗುತ್ತದೆ. ಇದರಿಂದ ಸಾಗಾಟದ ಖರ್ಚು ಉಳಿತಾಯವಾಗಿ ರೈತರಿಗೆ ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭ ಕೊಂಕಣ ರೈಲ್ವೆಯ ಪುತ್ತೂರು ವಿಭಾಗದ ಪಿ.ಆರ್.ಬಿ. ಸುಧಾಕೃಷ್ಣ ಮೂರ್ತಿ, ರಿಜಿನಲ್ ಟ್ರಾಫಿಕ್ ಮೆನೇಜರ್ ವಿನಯ್ ಕುಮಾರ್, ಸಂಘದ ನಿರ್ದೇಶಕರುಗಳಾದ ಸುಂದರ ಗೌಡ ಇಜ್ಜಿಲ, ಪದ್ಮಗೌಡ, ಗ್ರೇಸಿಯನ್ ವೇಗಸ್, ಅನಂತ ಭಟ್, ಜಯಶ್ರೀ ಡಿ.ಎಂ, ಬಾಲಕೃಷ್ಣ ಗೌಡ, ಡಾ| ಶಶಿಧರ ಡೋಂಗ್ರೆ , ವಿ.ವಿ ಅಬ್ರಾಹಂ ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಜು ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ನಿರ್ದೇಶಕ ಅನಂತ ಭಟ್ ಮಚ್ಚಿಮಲೆ ವಂದಿಸಿದರು.