ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಮುಂಡಾಜೆ, ಕಡಿರುದ್ಯವರದ, ವಳಂಬ್ರ ಕುದುರೆಮುಖ ವನ್ಯಜೀವಿ ವಲಯ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮರ ಕಡಿಯುತ್ತಿರುವ ಬಗ್ಗೆ ಖಚಿತ ಮಾಹಿತಿ ಅರಣ್ಯ ಘಟಕದ ಪುತ್ತೂರಿನ ವಿಶೇಷ ಪೊಲೀಸ್ ಅರಣ್ಯ ಸಂಚಾರಿ ದಳದ ತಂಡಕ್ಕೆ ದೊರೆತ ಹಿನ್ನೆಲೆಯಲ್ಲಿ ಸೋಮವಾರ 28-9-2020 ರಂದು 4 ಕಿ.ಮೀ ಅರಣ್ಯ ಪ್ರದೇಶದಲ್ಲಿ ನಡೆದುಕೊಂಡು ಹೋಗಿ ದಾಳಿ ಮಾಡಿದ್ದು ಬೇಂಗ ಜಾತಿಯ ಮರದ ದಿಮ್ಮಿ,ಹಲಗೆ, ಸೈಜು ಗಳನ್ನು ಪತ್ತೆ ಹಚ್ಚಿದ್ದಾರೆ. 50.833 CFT ಅಗಿದ್ದು ಇದರ ಮೌಲ್ಯ 1 ಲಕ್ಷದ 50ಸಾವಿರ ಆಗಿದೆ. ಈ ವೇಳೆ ಆರೋಪಿಗಳು ಪರಾರಿಯಾಗಿದ್ದಾರೆ. ಈ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ತನಿಖೆಗೆ ಬೆಳ್ತಂಗಡಿ ವನ್ಯಜೀವಿ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ.ಬೆಂಗಳೂರು ಸಿಐಡಿ ಅರಣ್ಯ ಘಟಕದ ಪುತ್ತೂರು ವಿಶೇಷ ಪೊಲೀಸ್ ಅರಣ್ಯ ಸಂಚಾರಿ ದಳದ ಪಿಎಸ್ಐ ಜಯ.ಕೆ, ಸುಂದರ್ ಶೆಟ್ಟಿ, ವಿಜಯ, ಉದಯ, ರಾಧಕೃಷ್ಣ. ಜಿ.ಬಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.