ಉಜಿರೆ: ಪ್ರತಿಷ್ಠಿತ ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘ ಉಜಿರೆ ಇದರ ಮುಂದಿನ ಐದು ವರ್ಷಗಳ ಚುನಾಯಿತ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ 15 ಮಂದಿ ನಿರ್ದೇಶಕರು ಆವಿರೋಧ ಆಯ್ಕೆಯಾಗಿದ್ದಾರೆ.
ಆಡಳಿತ ಮಂಡಳಿ ನಿದೇ೯ಶಕರುಗಳಾಗಿ, ಜಯಶ್ರೀ ಡಿಎಂ, ಸೀತಾರತ್ನಾ, ಭೈರಪ್ಪ, ಕೆ., ರಾಮನಾಯ್ಕ, ಸೋಮನಾಥ ಬಂಗೇರ, ಅನಂತಭಟ್ ಎಂ, ಗ್ರೇಸಿಯಸ್ ವೇಗಸ್, ಇ.ಸುಂದರ ಗೌಡ,ಹೆಚ್.ಪದ್ಮ ಗೌಡ ,ಕೆ.ಜೆ. ಆಗಸ್ಟೀನ್, ಪಿ.ವಿ. ಅಬ್ರಹಾಂ, ಪದ್ಮನಾಭ ಎನ್. ಬಾಲಕೃಷ್ಣ ಗೌಡ ಕೆ.,ಶಶಿಧರ ಡೋಂಗ್ರೆ, ಶ್ರೀಧರ ಜಿ.ಭಿಡೆ ಆಯ್ಕೆ ಯಾಗಿದ್ದು ,ಎಲ್ಲಾ ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆದಿದೆ ಎಂದು ಚುನಾವಣಾಧಿಕಾರಿಯಾದ ಸಹಕಾರಿ ಅಭಿವೃದ್ಧಿ ಅಧಿಕಾರಿ ಸುಕನ್ಯಾ ತಿಳಿಸಿದ್ದಾರೆ.