ಹಲೇಜಿ: ಪಂಡಿತ್ ದೀನ್ ದಯಾಳ್ ಅವರ ಜನ್ಮ ದಿನದ ಸ್ಮರಣೆ; ಬಿಜೆಪಿ ಗ್ರಾಮ ಸಮಿತಿಯಿಂದ ಸ್ವಚ್ಚತಾ ಕಾರ್ಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಹಲೇಜಿ: ಸದಾ ರಾಷ್ಟ್ರ ಸೇವೆಯಲ್ಲಿ ತಮ್ಮ ಇಡೀ ಜೀವನವನ್ನು ಸವೆದು, ದೇಶದ ಯುವ ಪೀಳಿಗೆಗೆ ಆದರ್ಶಪ್ರಾಯರಾಗಿರುವ ಮಹಾನ್ ಸಂಘಟಕ ಪಂಡಿತ್ ದೀನ್ ದಯಾಳ್ ಅವರ ಜನ್ಮದಿನದ ಸ್ಮರಣೆ ಪ್ರಯುಕ್ತ ಬಿಜೆಪಿ ಗ್ರಾಮ ಸಮಿತಿ ವತಿಯಿಂದ ಸ್ವಚ್ಛತಾ ಕಾರ್ಯಕ್ರಮವನ್ನು ಹಲೇಜಿ ಶ್ರೀ ಮಹಾಲಿಂಗೇಶ್ವರ ದೇವರ ವಠಾರದಲ್ಲಿ ನಡೆಯಿತು. ‌‌ ಕಾರ್ಯಕ್ರಮದ ಆರಂಭದಲ್ಲಿ ಪಂಡಿತ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಸ್ವಚ್ಛತಾ ಕಾರ್ಯವನ್ನು ಮಾಡಲಾಯಿತು. ಪಂಡಿತ್ ದೀನ್ ದಯಾಳ್ ಅವರ ವ್ಯಕ್ತಿತ್ವದ ಪರಿಚಯವನ್ನು ನೆರೆದಿದ್ದ ಸಭಿಕರಿಗೆ ಉರುವಾಲು ಬಿಜೆಪಿ ಬೂತ್ ಕಾರ್ಯದರ್ಶಿ ಚಿದಾನಂದ ಮಾಡಿದರು.

ಈ ಸಂದರ್ಭದಲ್ಲಿ ಉರುವಾಲು ಬಿಜೆಪಿ ಬೂತ್ ಅಧ್ಯಕ್ಷ ಕೃಷ್ಣಪ್ಪಗೌಡ, ಕಾಣಿಯೂರು ಪಂಚಾಯತಿನ ಮಾಜಿ ಅಧ್ಯಕ್ಷ ಹಾಗೂ ಉರುವಾಲು ಶಕ್ತಿಕೇಂದ್ರದ ಪ್ರಮುಖ್ ಸುನಿಲ್ ಸಾಲಿಯಾನ್, ವಾರ್ಡಿನ ಮಾಜಿ ಸದಸ್ಯೆ ಪುಷ್ಪ, ಸದಸ್ಯರಾದ ರೋಹಿತ್ ಶೆಟ್ಟಿ ಕುಪ್ಪೆಟ್ಟಿ, ಸುಶ್ರುತ ಭಟ್ ಹಲೇಜಿ, ಹರೀಶ್ ಕುಪ್ಪೆಟ್ಟಿ, ಜಯರಾಮ ಹಲೇಜಿ, ಸುಧೀರ್. ಕೆ.ಯನ್ ಹಲೇಜಿ, ಯೋಗೀಶ್, ಸುರೇಶ್ ನಾಣೀಲು, ದೇವಸ್ಥಾನದ ಕಾರ್ಯದರ್ಶಿ ವಿಜಯ್ ಭಟ್, ಜೊತೆ ಕಾರ್ಯದರ್ಶಿ ಸುರೇಶ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.