ಬೆಳ್ತಂಗಡಿ: ಪರಮ ಪೂಜ್ಯ ಜಗದ್ಗುರು ಸ್ವಸ್ತಿ ಶ್ರೀ ಡಾ|| ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ,ಶ್ರೀ ಜೈನ ಮಠ,ಮೂಡಬಿದಿರೆ ಇವರ ಪಾವನ ಸಾನಿದ್ಯದಲ್ಲಿ ಶ್ರೀ ಜೈನ ಮಠದಲ್ಲಿ ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗದ ನಿರ್ದೇಶಕರ ವಿಶೇಷ ಸಭೆ ಜರಗಿತು. ವಲಯ 8ರ ಉಪಾಧ್ಯಕ್ಷ ವೀರ್ ಸುದರ್ಶನ ಜೈನ್ ಇವರ ಘನ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ನಿರ್ದೇಶಕರಾದ ವೀರ್ ಬಿ.ಸೋಮಶೇಖರ ಶೆಟ್ಟಿ,ವೀರ್ ಮಹಾವೀರ್ ಹೆಗ್ಡೆ ಅಂಡಾರು,ವೀರ್ ರಾಜವರ್ಮ ಆರಿಗ ಹಾಗೂ ಇತರರು ಭಾಗವಹಿಸಿದರು, ಕಾರ್ಯದರ್ಶಿ ವೀರ್ ಸುಭಾಶ್ಚಂದ್ರ ಜೈನ್ ಎಲ್ಲರನ್ನೂ ಸ್ವಾಗತಿಸಿ ಸಭೆಯ ಉದ್ದೇಶವನ್ನು ವಿವರಿಸಿದರು.
ಜೈನ್ ಮಿಲನ್ ಸಂಸ್ಥೆಗೆ ವಿಶೇಷ ಸೇವೆಗೈದು ಇತ್ತೀಚೆಗೆ ನಿಧನರಾದ ಮಿಲನ್ ಬಂಧುಗಳಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು.ವೀರ್ ಸುದರ್ಶನ ಜೈನ್ ಇವರು ನಿರ್ದೇಶಕರಿಂದ ಮಾಹಿತಿ ಪಡೆದರಲ್ಲದೆ ಕೊರೋನ ಸಮಯದಲ್ಲಿ ಅರ್ಹ ಶ್ರಾವಕ/ಶ್ರಾವಕಿಯರಿಗೆ ಸಮಯೋಚಿತ ನೆರವು ನೀಡಿದ ಮಿಲನ್ ಅಧ್ಯಕ್ಷರನ್ನೂ,ತಂಡವನ್ನೂ ಶ್ಲಾಘಿಸಿದರು. ಎಲ್ಲಾ ಮಿಲನ್ಗಳು ಸದಾ ಚಟುವಟಿಕೆಯಿಂದ ಇರುವ ಹಾಗೇ ಸರಕಾರದ ನಿಯಮಗಳನ್ನು ಪಾಲಿಸಿ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಮಾರ್ಗದರ್ಶನ ನೀಡಲಾಯಿತು. ನೂತನ ಪದಾಧಿಕಾರಿಗಳ ಆಯ್ಕೆ,ಶೈಕ್ಷಣಿಕ ಸೌಲಭ್ಯಗಳು,ವಿದ್ಯಾರ್ಥಿವೇತನ ಇವುಗಳ
ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಯಿತು. ಮುಂದಿನ ವರ್ಷದಲ್ಲಿ ಕರಾವಳಿ ಸಮಾವೇಷವನ್ನು ಬಂಟ್ವಾಳ ಜೈನ್ ಮಿಲನ್ ಆಶ್ರಯದಲ್ಲಿ ಆಯೋಜಿಸುವರೇ ಸರಕಾರದ ಆದೇಶವನ್ನು ಕಾಯ್ದು ನೋಡುವಂತೆ ತೀರ್ಮಾನಿಸಲಾಯಿತು. ನಿರ್ದೇಶಕರು ತಮ್ಮ ಅಭಿಪ್ರಾಯ ಮಂಡಿಸಿದ ಬಳಿಕ ಕಾರ್ಯದರ್ಶಿ ವೀರ್ ಸುಭಾಶ್ಚಂದ್ರ ವಂದಿಸಿದರು.ಈ ಕಾರ್ಯಕ್ರಮವನ್ನು ನಿರ್ದೇಶಕರಾದ ವೀರ್ ಜಯರಾಜ ಕಂಬಳಿ ಆಯೋಜಿಸಿದ್ದರು. ಬಳಿಕ ಪೂಜ್ಯ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ವಿಶ್ವ ಪ್ರವಾಸೋದ್ಯಮದ ಅಂಗವಾಗಿ ಸಾವಿರ ಕಂಬದ ಬಸದಿಯಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.