ಭಾರತ ಬಂದ್ ಬೆಂಬಲಕ್ಕೆ ಸಿಪಿಐಎಂ ಕರೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

ಬೆಳ್ತಂಗಡಿ: *ರೈತ ಕಾರ್ಮಿಕರ ಹಿತಕ್ಕಾಗಿ ಕನಾ೯ಟಕ ಬಂದ್ ಗೆ ಸಹಕರಿಸಲು ಬೆಳ್ತಂಗಡಿ ತಾಲ್ಲೂಕು ಜನತೆಯಲ್ಲಿ ಸಿಪಿಐ(ಎಂ) ಮನವಿ ಮಾಡಿದ್ದಾರೆ.

ಸಂಸತ್ ಹಾಗು ರಾಜ್ಯ ಶಾಸನ ಸಭೆಗಳು ಅಂಗೀಕರಿಸಿರುವ ಕೃಷಿ ಸಂಬಂಧಿತ ಕಾನೂನುಗಳ ತಿದ್ದುಪಡಿ ವಿಧೇಯಕಗಳು ಮತ್ತು ಕಾಮಿ೯ಕ ಕಾನೂನುಗಳ ತಿದ್ದುಪಡಿ ವಿಧೇಯಕಗಳು ಹಾಗು ಸಂಹಿತೆಗಳು ರೈತರು,ಕಾಮಿ೯ಕರ ಬದುಕುಗಳ ಮೇಲೆ ಪ್ರತಿಗಾಮಿ ಪರಿಣಾಮಗಳನ್ನು ಬೀರಲಿವೆ.

ರಾಷ್ಟ್ರದ ಕೃಷಿ ಮತ್ತು ಭೂಮಿ ಉಳ್ಳವರ ಪಾಲಾಗಲಿವೆ. ಈಗಾಗಲೆ ಸಂಕಷ್ಟಕ್ಕೆ ಸಿಲುಕಿರುವ ರೈತರು ಮತ್ತಷ್ಟು ದಿವಾಳಿಯಾಗಲಿದ್ದಾರೆ. ಬೇಕೆಂದಾಗ ಬಳಸಿ ಬೇಡವಾದಾಗ ಬಿಸಾಕಲು ಕಾಮಿ೯ಕ ಸಂಹಿತೆಗಳು ಮುಕ್ತ ಅವಕಾಶವನ್ನು ಬಂಡವಾಳಿಗರಿಗೆ ನೀಡಿರುವ ಕಾರಣ ಕಾಮಿ೯ಕರ ಉದ್ಯೋಗ ಭದ್ರತೆ ಇಲ್ಲವಾಗಿ ನಿರುದ್ಯೋಗವು ತೀವ್ರವಾಗಿ ಹೆಚ್ಚಳವಾಗಲಿದೆ. ಕೋವಿಡ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ರಾಷ್ಟ್ರದ ಹಾಗೂ ರಾಜ್ಯದ ಆಥಿ೯ಕತೆಯು ಮತ್ತಷ್ಟು ಹಿನ್ನೆಡೆಯನ್ನು ಈ ಕಾನೂನುಗಳ ಬದಲಾವಣೆಯಿಂದ ಅನುಭವಿಸಲಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ರೈತರ ಹಾಗು ಕಾಮಿ೯ಕರ ಸಂಘಟನೆಗಳು ಸೆಪ್ಟೆಂಬರ್ 28 ರಂದು ಒಂದು ದಿನದ ಸ್ವಯಂಪ್ರೇರಿತ ಕನಾ೯ಟಕ ಬಂದ್ ಗೆ ಕರೆ ನೀಡಿವೆ. ಸ್ವತಂತ್ರ ಹೋರಾಟದ ವೇಳೆ ಬ್ರಟೀಷರಿಗೆ ಸಿಂಹ ಸ್ವಪ್ನವಾಗಿದ್ದ ಹುತಾತ್ಮ ಭಗತ್ ಸಿಂಗ್ ಜನ್ಮ ದಿನದಂದು ರಾಜ್ಯದ ರೈತರು ಕಾಮಿ೯ಕರ ಹಿತಕಾಯಲು ನಡೆದಿರುವ ಕನಾ೯ಟಕ ಬಂದ್ ಗೆ ಬೆಳ್ತಂಗಡಿ ಜನತೆಯು ಸ್ವಯಂ ಪ್ರೇರಿತರಾಗಿ ಸಹಕರಿಸಿ ಬೆಂಬಲಿಸಿ ಯಶಸ್ವಿಗೊಳಿಸ ಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ೯ವಾದಿ) ಬೆಳ್ತಂಗಡಿ ತಾಲ್ಲುಕು ಸಮಿತಿ ಕಾಯ೯ದಶಿ೯  ಶಿವಕುಮಾರ್ ಎಸ್. ಎಂ,ಶೇಖರ್ ಎಲ್
ವಸಂತ   ಕರೆ ನೀಡಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.