ಬೆಳ್ತಂಗಡಿ: ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಾಮಚಂದ್ರ ಬಾಯರಿ ಸೆ.26 ರಂದು ಆಗಮಿಸಿ, ಆಸ್ಪತ್ರೆಯ ಡಯಾಲೀಸಿಸ್ ಕೆಂದ್ರವನ್ನು ಪರಿಶೀಲನೆ ನಡೆಸಿದರು.
ಬಳಿಕ ಡಾಯಲೀಸಿಸ್ ಕೇಂದ್ರದ ಮುಖ್ಯಸ್ಥೆ, ಸಿಬಂದಿ ವಗ೯ ಹಾಗೂ ತಾಲೂಕು ವೈದ್ಯಾಧಿಕಾರಿಗಳಲ್ಲಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಡಯಾಲೀಸಿಸ್ ರೋಗಿಗಳ ಪರವಾಗಿ ಮಹೇಶ್ ಅವರು ಕೇಂದ್ರದ ಸಮಸ್ಯೆ ಗಳನ್ನು ಆರೋಗ್ಯಾಧಿಕಾರಿಗಳ ಗಮನಕ್ಕೆ ತಂದರು. ಸಮಸ್ಯೆ ಗಳನ್ನು ನಿವಾರಿಸುವ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳ ಭರವಸೆ ನೀಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ಕಲಾಮಧು, ಆಡಳಿತಾಧಿಕಾರಿ ಡಾ. ಚಂದ್ರಕಾಂತ್ ಮೊದಲಾದವರು ಉಪಸ್ಥಿತರಿದ್ದರು. ಕಳೆದ ವಾರ ಕಾಾಂಗೇಸ್ ನಿಯೋಗ ಆಸ್ಪತ್ರೆಗೆ ಭೇಟಿ ನೀಡಿ ಇಲ್ಲಿ ಯ ಅವ್ಯವಸ್ಥೆೆಗೆ ಆಕ್ರೋಶ ವ್ಯಕ್ತಪಡಿಸಿತ್ತು.