ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವರ್ಷಂಪ್ರತಿಯಂತೆ ನಡೆಯುವ ಭಜನಾ ಕಮ್ಮಟವನ್ನು ಕೋವಿಡ್-19ರ ಕಾರಣಕ್ಕಾಗಿ ಈ ಬಾರಿ ಸಾಂಕೇತಿಕವಾಗಿ ಪ್ರಾರ್ಥನಾ ಸಮಾವೇಶವೆಂದು, ಆಯ್ದ ಕೆಲವು ಭಜನಾ ಸಂಘಗಳನ್ನು ಆಹ್ವಾನಿಸಿ 2020ರ ಅಕ್ಟೋಬರ್ 3ರ ಶನಿವಾರದಂದು ಮುಂಜಾನೆ 9.30ರಿಂದ ಮಧ್ಯಾಹ್ನ 1.30ರ ತನಕ ಮಹೋತ್ಸವ ಸಭಾಭವನದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಎಂದು ಭಜನಾ ಕಮ್ಮಟದ ಕಾರ್ಯದರ್ಶಿ ಶ್ರೀಮತಿ ಮಮತಾ ಹರೀಶ್ ರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.