ಸೆಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರುನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ರಾಷ್ಟ್ರೀಯ ಸೇವಾ ಯೋಜನಾ ಘಟಕ, ಸೇಕ್ರೆಡ್ ಹಾರ್ಟ್ ಕಾಲೇಜು ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ| ಪ್ರಕಾಶ್ ಕ್ರಮಧಾರಿಯವರು ಮಾತನಾಡಿ ಎನ್. ಎಸ್. ಎಸ್. ಮೂಲಕ ಪಡೆದ ವಿದ್ಯೆಯನ್ನು ಸಮಾಜದಲ್ಲಿನ ಪ್ರಚಲಿತ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಲ್ಲಿ ಉಪಯೋಗಿಸಬೇಕು, ಹಾಗೆಯೇ ಸಹಬಾಳ್ವೆ ಹಾಗೂ ಸಹಜೀವನದಿಂದ ಸಮಾಜಕ್ಕೆ ಮಾದರಿಯಗಲು ಕರೆ ಕೊಟ್ಟರು.

ವಿಶೇಷ ಅಹ್ವಾನಿತರಾಗಿ ಕರ್ನಾಟಕ ಸರಕಾರ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಪ್ರಾಯೋಜಿತ ‘ಯುವ ಸ್ಪಂದನ ‘ ಇದರ ದ. ಕ ಜಿಲ್ಲಾ ಪ್ರತಿನಿಧಿಯಾಗಿರುವ ಶ್ರೀ ಶಾಂತಪ್ಪ ಇವರು ಮಾತನಾಡಿ, ಯುವ ಸ್ಪಂದನ ಕಾರ್ಯಕ್ರಮದ ಉದ್ದೇಶ ಹಾಗೂ ವಿವಿಧ ಕಾರ್ಯಕ್ರಮಗಳನ್ನು ತಿಳಿಹೇಳಿದರು.
ಅಧ್ಯಕ್ಷೀಯ ಭಾಷಣದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ|ಜೋಸೆಫ್ ಎನ್.ಎಮ್. ಇವರು ಮಾತನಾಡಿ ತಮ್ಮ ಎನ್.ಎಸ್. ಎಸ್. ಅವಧಿಯ ಅನುಭವಗಳನ್ನು ಹಂಚಿದರು ಹಾಗೆಯೇ, ಎಲ್ಲಾ ಸ್ವಯಂ ಸೇವಕರಿಗೆ ದಿನದ ಶುಭಹಾರೈಕೆಗಳನ್ನು ತಿಳಿಸಿದರು.

ಗೂಗಲ್ ಮೀಟ್ ಮೂಲಕ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು 120 ಮಂದಿ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಅಧ್ಯಾಪಕರು ಭಾಗವಹಿಸಿದರು. ಘಟಕ ಯೋಜನಾಧಿಕಾರಿಗಳಾದ ಪ್ರೊ| ಜನಾರ್ಧನ್ ನಾಯರ್, ಸ್ವಾಗತಿಸಿದರು. ಶ್ರೀ ರಾಬಿನ್ ಜೋಸೆಫ್ ಸೇರಾ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.