ಜಿಲ್ಲೆಯ ಎಲ್ಲಾ ಗ್ರಾ.ಪಂ.ವ್ಯಾಪ್ತಿಗಳಲ್ಲಿರುವ ಸಾರ್ವಜನಿಕರಿಗೆ ವಾರದೊಳಗೆ ಕೊರೋನಾ ಪರೀಕ್ಷೆ

ಬೆಳ್ತಂಗಡಿ:ಜಿಲ್ಲೆಯಲ್ಲಿ ಕೋವಿಡ್-೧೯ ಖಚಿತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅದರ ನಿಯಂತ್ರಣಕ್ಕಾಗಿ ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ಮತ್ತು ಸೋಂಕಿತ ವ್ಯಕ್ತಿಯಿಂದ ಸಾರ್ವಜನಿಕ ವಲಯದಲ್ಲಿ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಗ್ರಾ.ಪಂ ವ್ಯಾಪ್ತಿಗಳಲ್ಲಿ ಸೆ.28ರಿಂದ ಒಂದು ವಾರದೊಳಗೆ ಎಲ್ಲಾ ಸಾರ್ವಜನಿಕರ ಕೋವಿಡ್ ಪರೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ದ.ಕ.ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕಿನ ಪ್ರಕರಣಗಳ ನಿಯಂತ್ರಣಕ್ಕಾಗಿ ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ಕೋವಿಡ್ ಪರೀಕ್ಷೆಯನ್ನು ಕೂಡಾ ಹೆಚ್ಚು ಮಾಡಬೇಕಾಗಿದೆ.ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತ ವ್ಯಕ್ತಿಯಿಂದ ಸಾರ್ವಜನಿಕ ವಲಯದಲ್ಲಿ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳನ್ನು ಅದೇ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸಂಪರ್ಕಿಸಿ ಆಯಾ ಗ್ರಾ.ಪಂ.ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಎಲ್ಲಾ ಸಾರ್ವಜನಿಕರ ಕೋವಿಡ್ ಪರೀಕ್ಷೆಯನ್ನು ವಾರದೊಳಗೆ ನಡೆಸಿ ಕೂಡಲೇ ವರದಿ ಸಲ್ಲಿಸಲು ಆದೇಶದಲ್ಲಿ ತಿಳಿಸಲಾಗಿದೆ.

ಸೆ.28ರಂದು ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಡೆದ ವಿಡಿಯೋ ಕಾನ್ಫರೆನ್ಸ್ ಆದೇಶದನ್ವಯ ಈ ಕ್ರಮ ಕೈಗೊಳ್ಳಲಾಗಿದೆ.ಗ್ರಾ.ಪಂ ವ್ಯಾಪ್ತಿಯಲ್ಲಿ ನಡೆಸುವ ಶಿಬಿರಗಳನ್ನು ಮತ್ತು ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವಂತೆ ಸೂಕ್ತ ಕ್ರಮವಹಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

ಬೆಳ್ತಂಗಡಿ: ಅಳದಂಗಡಿ(ಸೆ.28), ಬಳಂಜ(ಸೆ.29), ಸುಲ್ಕೇರಿ(ಸೆ.30), ಶಿರ್ಲಾಲು(ಅ.1),ಮಡಂತ್ಯಾರು(ಸೆ.28), ಧರ್ಮಸ್ಥಳ(ಸೆ.28), ಬೆಳಾಲು(ಸೆ.29), ಅರಸಿನಮಕ್ಕಿ(ಸೆ.28), ಶಿಬಾಜೆ(ಸೆ.29), ಶಿಶಿಲ(ಸೆ.30), ಕಳೆಂಜ(ಅ.1), ನಾವೂರು(ಸೆ.28), ಕನ್ಯಾಡಿ(ಸೆ.29), ಮಿತ್ತಬಾಗಿಲು(ಸೆ.30), ಇಂದಬೆಟ್ಟು(ಅ.1), ಕಣಿಯೂರು(ಸೆ.28), ತೆಕ್ಕಾರು(ಸೆ.29), ಬಂದಾರು(ಸೆ.30), ಇಳಂತಿ(ಅ.1), ತಣ್ಣೀರುಪಂಥ(ಅ.2) ಬಾರ್ಯ(ಅ.3), ಮಚ್ಚಿನ (ಅ.5), ಕೊಕ್ಕಡ(ಸೆ.28) ಪಟ್ರಮೆ(ಸೆ.29), ನಿಡ್ಲೆ(ಸೆ.30) ಕಡಿರುದ್ಯಾವರ(ಸೆ.28), ಮಲವಂತಿಗೆ(ಸೆ.29), ಮುಂಡಾಜೆ(ಸೆ.30), ಕಲ್ಮಂಜ(ಅ.1), ನಾರಾವಿ(ಸೆ.28), ಅಂಡಿಂಜೆ(ಸೆ.29), ಪೆರಾಡಿ(ಸೆ.30), ಕಾಶಿಪಟ್ಣ(ಅ.1), ನೆರಿಯ(ಸೆ.28),ಪುದುವೆಟ್ಟು(ಸೆ.29), ಚಾರ್ಮಾಡಿ(ಸೆ.30), ಪಡಂಗಡಿ(ಸೆ.28), ಮೇಲಂತಬೆಟ್ಟು(ಸೆ.29) ಮಾಲಾಡಿ(ಸೆ.30), ಕಳಿಯ(ಅ.1), ಕುವೆಟ್ಟು(ಅ.2), ಉಜಿರೆ(ಸೆ.8), ಕೊಯ್ಯೂರು(ಸೆ.29), ಲಾಲಯಿಲ(ಸೆ.30), ವೇಣುರು(ಸೆ.28)ಆರಂಬೋಡಿ(ಸೆ.29), ನಿಟ್ಟಡೆ(ಸೆ.30), ಹೊಸಂಗಡಿ(ಅ.1)

Advt_NewsUnder_2

About The Author

Related posts

2 Comments

  1. ABHILASH

    ಬೆಳ್ತಂಗಡಿ ಪಟ್ಟಣ ಪಂಚಾಯಿತಿಗೆ ತಾರೀಕು ಗೊತ್ತುಪಡಿಸಿಲ್ಲವೆ. ಪಟ್ಟಣ ಪಂಚಾಯಿತಿ ಆಡಳಿತ ವ್ಯವಸ್ಥೆ ಸರಿಯಿಲ್ಲ.

    Reply

Leave a Reply

Your email address will not be published. Required fields are marked *

Copy Protected by Chetan's WP-Copyprotect.