ನಾವರ: ಆಯುಷ್ಮಾನ್ ಕಾರ್ಡ್ ನೊಂದಾವಣೆ; 312 ಮಂದಿಗೆ ವಿತರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ನಾವರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಗುರುವಾಯನಕೆರೆ, ಪ್ರಗತಿ ಬಂಧು ಒಕ್ಕೂಟ ನಾವರ ಇವುಗಳ ಸಂಯುಕ್ತ ಆಶ್ರಯದಲ್ಲಿ ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸಾರ್ವಜನಿಕ ಉಚಿತ ಆಯುಷ್ಮಾನ್ ಕಾರ್ಡ್ ನೋಂದಾವಣೆ ಹಾಗೂ ವಿತರಣಾ ಕಾರ್ಯಕ್ರಮವು ಜರಗಿತು.


ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾವೃದ್ಧಿ ಯೋಜನೆ ಗುರುವಾಯನಕೆರೆ ಯ ಯೋಜನಾಧಿಕಾರಿ ಯಶವಂತ ಎಸ್ ನೆರವೇರಿಸಿ ಮಾತಾನಾಡಿ ಗ್ರಾಮೀಣ ಪರಿಸರದ ಜನರ ನಾಡಿ ಮಿಡಿತ ಅರಿತು ಅವರ ಮನೆ ಬಾಗಿಲಿಗೆ ಆಯುಷ್ಮಾನ್ ಕಾರ್ಡ್ ನ್ನು ತರುವಂತಹ ಕೆಲಸವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡಿದೆ ಇದರ ಸದುಪಯೋಗವನ್ನು ನಾವೆಲ್ಲರೂ ಪಡೆಯೋಣ ಎಂದರು.
ವಲಯಾಧ್ಯಕ್ಷ ನಿತ್ಯಾನಂದ ನಾವರ ಮಾತಾನಾಡಿ ಪೂಜ್ಯ ಖಾವಂದರು ಹಾಗೂ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ಚಿಂತನೆಗಳು ಒಂದೇ ರೀತಿ ಇರುವುದರಿಂದ ಈ ಸೌಲಭ್ಯವನ್ನು ನಾವಿಂದು ಪಡೆಯುವಂತಾಗಿದೆ ಎಂದರು.

ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕಿ ಶ್ರೀಮತಿ ಮಲ್ಲಿಕಾ , ಜ್ಞಾನವಿಕಾಸ ಸಮನ್ವಯಾಧಿಕಾರಿ ಹರಿಣಿ, ಸೇವಾ ಪ್ರತಿನಿಧಿ ಪುಷ್ಪಾವತಿ, ಪ್ರಗತಿ ಬಂಧು ಒಕ್ಕೂಟ ನಾವರ ಅಧ್ಯಕ್ಷ ವೀರೇಂದ್ರ ಕುಮಾರ್ ಜೈನ್ ,ಚಿದಾನಂದ ಕೋಟ್ಯಾನ್ ಆಯುಷ್ಮಾನ್ ಕಾರ್ಡ್ ನೋಂದಾವಣಾ ಅಧಿಕಾರಿ ದೀಪಕ್ ಉಪಸ್ಥಿತರಿದ್ದರು.
ಸುಮಾರು 312 ಕಾರ್ಡ್ ನೊಂದಾವಣೆಯಾಗಿ ವಿತರಣೆ ಮಾಡಲಾಯಿತು,ಒಕ್ಕೂಟದ ಕಾರ್ಯದರ್ಶಿ ಪ್ರಶಾಂತ್ ವಂದಿಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.