ಬೆಳ್ತಂಗಡಿ ಯುವವಾಹಿನಿ ಆಶ್ರಯದಲ್ಲಿ “ಬುಲೆಚ್ಚಿಲ್” ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ಹಾಗು ಯುವವಾಹಿನಿ ಮಹಿಳಾ ಸಂಚಾಲನ ಸಮಿತಿ, ಬೆಳ್ತಂಗಡಿ ಇವರ ಸಹಕಾರದೊಂದಿಗೆ “ಬುಲೆಚ್ಚಿಲ್” ಮನೆ ಅಂಗಳದಲ್ಲೊಂದು ಸಾವಯವ ತೋಟ ಎಂಬ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಕೋಟಿ ಚೆನ್ನಯ ಸೇವಾ ಸಂಘ ಕುಕ್ಕೆಡಿ ಯ ಅಧ್ಯಕ್ಷರಾದ ಅಮ್ಮಾಜಿ ಪೂಜಾರಿ ಉದ್ಘಾಟಿಸಿ ಶುಭ  ಹಾರೈಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ನಿರ್ದೇಶಕರು ಅಧಿಶಕ್ತಿ ಬಯೋ ಫಾರ್ಮರ್ ಪ್ರೋಡ್ಯೂಸರ್ ಕಂಪನಿಯ ನಿರ್ದೇಶಕರಾದ
ರೂಪೇಶ್ ಧರ್ಮಸ್ಥಳ ಇವರು ಮಾತನಾಡಿ ಮನೆ ಅಂಗಳದಲ್ಲೆ ಸುಲಭವಾಗಿ ಹೇಗೆ ಸಾವಯವ ತೋಟ ಮಾಡಬಹುದು,ರಾಸಾಯನಿಕ ವಿಷವನ್ನು ಬಳಸದೆ ಕೀಟನಾಶಕಗಳನ್ನು ಹೇಗೆ ತಯಾರಿಸಬಹುದು.ಹಾಗೂ ಸಾವಯವ ಕೃಷಿ ಸಾಧಕ ಬಾದಕಗಳ ಬಗ್ಗೆ ಉಪನ್ಯಾಸ ನೀಡಿದರು.ಯುವವಾಹಿನಿ ಬೆಳ್ತಂಗಡಿ ಘಟಕ,ಅಧ್ಯಕ್ಷರಾದ ಎಮ್ ಕೆ ಪ್ರಸಾದ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಯುವವಾಹಿನಿ ಮಹಿಳಾ ಸಂಚಾಲನ ಸಮಿತಿಯ ಪ್ರಧಾನ ಸಂಚಾಲಕರಾದ ಶ್ರೀಮತಿ ಸುಜಾತ ಅಣ್ಣಿ ಪೂಜಾರಿ, ಘಟಕದ ಸಮಾಜ ಸೇವಾ ನಿರ್ದೇಶಕರಾದ ಮನೋಜ್ ಕುಂಜರ್ಪ,ಸಂಘಟನ ಕಾರ್ಯದರ್ಶಿ ,ಕಾರ್ಯಕ್ರಮದ ಸಂಚಾಲಕ ಸತೀಶ್ ಕೋಟ್ಯಾನ್ ಕುಕ್ಕೇಡಿ, ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಸಮೀಕ್ಷಾ ಪೂಜಾರಿ ಶಿರ್ಲಾಲು ಹಾಗು ನಿತೇಶ್ ಅದೇಲು ನಿರೂಪಿಸಿ, ಘಟಕದ ವ್ಯಕ್ತಿತ್ವ ವಿಕಸನ ನಿರ್ದೇಶಕರಾದ ರಾಜೇಶ್ ಮದ್ದಡ್ಕ ಸ್ವಾಗತಿಸಿ ಕಾರ್ಯದರ್ಶಿ ಗುರುರಾಜ್ ಗುರಿಪಳ್ಳ ವಂದಿಸಿದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.