ಬೆಳ್ತಂಗಡಿ ಡಯಾಲೀಸಿಸ್ ಕೇಂದ್ರಕ್ಕೆ ಕಾಂಗ್ರೆಸ್ ನಿಯೋಗ ಭೇಟಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಬೆಳ್ತಂಗಡಿ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿರುವ 6 ಡಯಾಲೀಸಿಸ್ ಮೆಶಿನ್‍ನಲ್ಲಿ ಮೂರು ಮೆಶಿನ್ ಕೆಟ್ಟು ಹೋಗಿದೆ. ಇಲ್ಲಿಯ ಮುಖ್ಯಸ್ಥೆ ಲೀಡಾ ಎನ್ನುವವರು ಸರಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿಲ್ಲ, ಇಲ್ಲಿ ಬರಲು ಎಲ್ಲ ರೋಗಿಗಳು ಹೆದರುತ್ತಿದ್ದಾರೆ. ಇಲ್ಲಿಯ ವ್ಯವಸ್ಥೆ ಸರಿಯಾಗುವವರೆಗೆ ಕಾಂಗ್ರೆಸ್ ಪಕ್ಷ ಹೋರಾಟ ನಡೆಸಲಿದೆ ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.
ಅವರು ಸೆ.23ರಂದು ಕಾಂಗ್ರೆಸ್ ನಿಯೋಗದೊಂದಿಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿರುವ ಡಯಾಲೀಸಿಸ್ ಕೇಂದ್ರಕ್ಕೆ ಭೇಟಿ ನೀಡಿ ಮಾಧ್ಯಮದವರ ಜೊತೆ ಮಾತನಾಡಿದರು.
ಇಲ್ಲಿಯ ಮುಖ್ಯಸ್ಥೆ ಲೀಡಾ ಎಂಬವರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ, ಇಲ್ಲಿಯ ವ್ಯವಸ್ಥೆಯ ವಿರುದ್ಧ ಮಾತನಾಡುವವರಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ, ತನ್ನ ತಾಯಿಯ ಅಸರ್ಮಕ ಚಿಕಿತ್ಸೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ವ್ಯಕ್ತಿಯ ಬಗ್ಗೆ ಲೀಡಾ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಒಂದು ದಿನ ಪೂರ್ತಿ ಅವರನ್ನು ಠಾಣೆಯಲ್ಲಿ ಇರಿಸಿಕೊಂಡು ನಂತರ ಬಿಟ್ಟಿದ್ದರು ಇದರಿಂದ ಇಲ್ಲಿಗೆ ರೋಗಿಗಳು ಬರಲು ಹೆದರುತ್ತಿದ್ದಾರೆ ಎಂದು ಬಂಗೇರ ಆಕ್ರೋಶ ವ್ಯಕ್ತಪಡಿಸಿದರು.
ಡಯಾಲೀಸಿಸ್ ಕೇಂದ್ರದಲ್ಲಿ ಲ್ಯಾಬ್ ಟೆಕ್ನೀಷಿಯನ್ ರಾತ್ರಿ ಹಗಲು ಕೆಲಸ ಮಾಡುತ್ತಿದ್ದಾರೆ. ಮೆಶಿನನ್ನು ತಿಂಗಳಿಗೊಮ್ಮೆ ಸರ್ವಿಸ್ ಮಾಡಬೇಕು ಎಂದಿದೆ ಆದರೆ ಇಲ್ಲಿ ಮಾಡುತ್ತಿಲ್ಲ, ಡಯಾಲಿಸಿಸ್ ಸಂದರ್ಭ ಅರ್ಧದಲ್ಲಿ ಮೆಶಿನ್ ಕೆಟ್ಟು ಹೋಗುತ್ತಿದೆ ಎಂದು ರೋಗಿಗಳು ಹೇಳುತ್ತಿದ್ದಾರೆ. ಹೆಪರಿನ್ ಇಂಜೆಕ್ಷನ್ ಸ್ಟಾಕ್ ಇಲ್ಲ, ಯೂಸ್ ಆಂಡ್ ತ್ರೋ ನಿಡಲ್ಸ್‍ನ್ನು ಇಲ್ಲಿ ಮರುಬಳಕೆ ಮಾಡುತ್ತಿದ್ದಾರೆ. ಬ್ಲಡ್ ಪ್ಯೂರಿಫೈ ಫಿಲ್ಟರ್‍ಗಳು ಇಲ್ಲ, ಹಾಳಾದ ಡಯಾಲೈಸರ್‍ನ್ನು ಉಪಯೋಗ ಮಾಡಬೇಕೆಂದು ಲೀಡಾರವರು ಹೇಳುತ್ತಾರೆ. ಇದರಿಂದ ಕಂಪೆನಿಯವರಿಗೆ ಲಾಭವಿದೆ. ಕ್ಯೂಬಿಂಗ್ ಪೈಪ್, ಡಯಾಲೈಸರನ್ನು ಒಂದೇ ಬಕೆಟ್‍ನಲ್ಲಿ ಹಾಕಿ ತೊಳೆಯುತ್ತಾರೆ ಎಂದು ಬಂಗೇರ ದೂರಿದರು.
ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ರಂಜನ್ ಜಿ. ಗೌಡ, ಜಿ.ಪಂ ಸದಸ್ಯರಾದ ಶೇಖರ ಕುಕ್ಕೇಡಿ, ನಮಿತಾ ಪೂಜಾರಿ, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್, ಮುಖಂಡರಾದ ಮನೋಹರ ಕುಮಾರ್ ಇಳಂತಿಲ, ಆಶ್ರಫ್ ನೆರಿಯ, ಜಯವಿಕ್ರಮ ತಣ್ಣೀರುಪಂತ, ಕೇಶವ ಗೌಡ ಬೆಳಾಲು, ಎ.ಸಿ ಮ್ಯಾಥ್ಯು, ಪ್ರವೀಣ್ ಕನ್ಯಾಡಿ, ಭರತ್ ಇಂದಬೆಟ್ಟು, ಅರೆಕ್ಕಲ್ ಮಮ್ಮಿಕುಂಞ,
ಸೇರಿದಂತೆ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.