ಅಭಯ ಆಸ್ಪತ್ರೆ ಯಲ್ಲಿ ಜನರಲ್ ಸರ್ಜನ್ ಸೇವೆ ಪ್ರಾರಂಭ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ಇಲ್ಲಿಯ ಜೈನ್ ಪೇಟೆ ಯಲ್ಲಿ ಕಳೆದ 16 ವರ್ಷ ದಿಂದ ಜನ ಸಾಮಾನ್ಯರಿಗೆ ಆರೋಗ್ಯ ಸೇವೆ ನೀಡುತ್ತಾ ಬಂದಿದ್ದು ಇದೀಗ ಸೆ. 23 ರಿಂದ ಪ್ರತೀ ದಿನ ಲಭ್ಯ ರಿರುವಂತೆ ವೈದ್ಯಾಧಿಕಾರಿ ಡಾ. ಕಿರಣ್ ಕುಮಾರ್ ನೇತೃತ್ವದ ಜನರಲ್ ಸರ್ಜನ್ ಸೇವೆ ಯನ್ನು ಸೆ. 23ರಂದು ಹಿರಿಯ ವೈದ್ಯಾಧಿಕಾರಿ ಡಾ. ಎನ್. ಎಂ. ತುಲುಪುಳೆ ಉದ್ಘಾಟಿಸಿ ಮಾತನಾಡಿ ಶಸ್ತ್ರ ಚಿಕಿಸ್ಸಾ ತಜ್ಞರು ಬೆಳ್ತಂಗಡಿಗೆ ಬರುವುದು ನಮ್ಮೆಲ್ಲರ ಸುಯೋಗ. ಈ ಆಸ್ಪತ್ರೆಯಲ್ಲಿ ಡಾ. ಶ್ರೀಹರಿ ಮತ್ತು ಡಾ. ವಿದ್ಯಾ ರವರು ಸಮರ್ಪಕ ವಾಗಿ ವೈದ್ಯಕೀಯ ಸೇವೆ ನೀಡುತ್ತಾ ಬಂದಿದ್ದಾರೆ. ಇಲ್ಲಿ ಇನ್ನೂ ಉತ್ತಮ ಆರೋಗ್ಯ ಸೇವೆ ನೀಡಲು ಪ್ರತೀ ದಿನ ಜನರಲ್ ಸರ್ಜನ್ ಕೂಡ ಲಭ್ಯ ರಿರುತ್ತಾರೆ. ಇವರ ಸೇವೆಯು ಉತ್ತಮ ವಾಗಲೆಂದು ಹಾರೈಸುತ್ತೇನೆ.

ಈ ಸಂದರ್ಭ ವೇಣೂರಿನ ಸಂತೋಷ್ ಕ್ಲಿನಿಕ್ ನ ಡಾ. ಸಂತೋಷ್ ರೇಗೊ, ನಮನ ಕ್ಲಿನಿಕ್ ನ ಡಾ. ಶಾಂತಿ ಪ್ರಸಾದ್, ಗುರುವಾಯನಕೆರೆಯ ಡಾ. ವೇಣುಗೋಪಾಲ್ ಶರ್ಮ, ಮಡಂತ್ಯಾರ್ ಪದ್ಮಾಂಬ ಕ್ಲಿನಿಕ್ ಡಾ. ರಾಜೇಶ್ ಪಾಂಡಿ, ಚಂದ್ರ ಮೆಡಿಕಲ್ ನ ವೆಂಕಟೇಶ್ ಭಟ್, ಎಸ್. ಎಂ . ಶಾಮಿಯಾನದ ಮಾಲಕ ಲತೀಫ್, ಡಾ. ಅಕ್ಷತಾ ಮೊದಲಾದವರು ಉಪಸ್ಥಿತರಿದ್ದರು. ಡಾ. ಕಿರಣ್ ಕುಮಾರ್ ಮಂಗಳೂರು ಕಣಚೂರು ಆಸ್ಪತ್ರೆ ಯಲ್ಲಿ ಸಹಾಯಕ ಪ್ರೊಫೆಸರ್ ಆಗಿ ಸಲ್ಲಿಸುತ್ತಿದ್ದರು ಇದೀಗ ಬೆಳ್ತಂಗಡಿ ಅಭಯ ಆಸ್ಪತ್ರೆ ಯಲ್ಲಿ ಪ್ರತೀ ದಿನ ಸಂಜೆ 5ರಿಂದ 8ಗಂಟೆ ವರೆಗೆ ಸೇವೆ ಗೆ ಲಭ್ಯ ರಿದ್ದಾರೆ ಎಂದು ಡಾ. ಶ್ರೀಹರಿ ಮಾಹಿತಿ ನೀಡಿ ಸರ್ವರನ್ನು ಸ್ವಾಗತಿಸಿ ವಂದಿಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.