ಬೆಳ್ತಂಗಡಿ: ಸ್ವಸ್ತಿಕ್ ಆಟೋ ಕೇರ್ ಸ್ಥಳಾಂತರಗೊಂಡು ಶುಭಾರಂಭ

ಬೆಳ್ತಂಗಡಿ: ಕಳೆದ ಹಲವು ಸಮಯದಿಂದ ಬೆಳ್ತಂಗಡಿ ಸಂತೆಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸ್ವಸ್ತಿಕ್ ಆಟೋಕೇರ್ ಇದೀಗ ಬೆಳ್ತಂಗಡಿ ವಾಣಿ ಕಾಲೇಜು ಮುಂಭಾಗದಲ್ಲಿರುವ ಕಾಂಪ್ಲೇಕ್ಸ್‌ಗೆ ಸ್ಥಳಾಂತರಗೊಂಡು ಸೆ.23 ರಂದು ಶುಭರಂಭಗೊಂಡಿತು. ಸಂಸ್ಥೆಯನ್ನು ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ನಿರ್ದೇಶಕ ಹರಿದಾಸ್ ಕೇದೆ ಉದ್ಘಾಟಿಸಿ ಶುಭಕೋರಿದರು.


ಈ ಸಂದರ್ಭದಲ್ಲಿ ಗುರುವಾಯನಕೆರೆ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಭಗೀರಥ ಜಿ, ಅಳದಂಗಡಿ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಚಂದ್ರಹಾಸ ಕೇದೆ, ಬೆಳ್ತಂಗಡಿ ಸುವರ್ಣ ಆರ್ಕೆಡ್ ಮಾಲಕ ವೈ ನಾಣ್ಯಪ್ಪ ಪೂಜಾರಿ, ಕಕ್ಕಿಂಜೆ ಮುತ್ತೋಟ್ಟು ಪೈನಾನ್ಸ್ ಮ್ಯಾನೇಜರ್ ರೋಹಿತ್, ಸ್ವಸ್ತಿಕ್ ಆಟೋಕೇರ್‍ಸ್ ಪ್ರೊಪೈಟರ್ ಧನರಾಜ್ ಕರ್ಕೆರಾ, ಮಂಗಳೂರು ಟೆರಿಟರ ಮ್ಯಾನೇಜರ್ ಮನೋಹರ್, ಸ್ವಸ್ತಿಕ್ ಆಟೋಕೇರ್‍ಸ್ ಮ್ಯಾನೇಜರ್ ಮೋಹಿತ್ ಕುಮಾರ್, ಪ್ರಗತಿಪರ ಕೃಷಿಕ ಲೋಕಯ್ಯ ಪೂಜಾರಿ ಪಿಲ್ಯ, ಗೋಪಾಲಕೃಷ್ಣ ಪೂಜಾರಿ ಧರ್ಮಸ್ಥಳ, ಮಹೇಶ್ ಪಿಲ್ಯ, ಆಟೋ ಚಾಲಕರಾದ ಹರೀಶ್ ಕುಮಾರ್, ಪಾರುಕೂ, ಉಮೇಶ್, ಪ್ರವೀಣ್, ಹರೀಶ್ಚಂದ್ರ ಪ್ರವೀಣ್ ಕುಮಾರ್, ಬಿಜೆಪಿ ಮೇಲಂತಬೆಟ್ಟು ಗ್ರಾಮ ಸಮಿತಿ ಅಧ್ಯಕ್ಷ ಚಂದ್ರರಾಜ್, ಹಾಗೂ ಬಂಧುಮಿತ್ರರು ಉಪಸ್ಥಿತರಿದ್ದರು.

ಬಂದಂತಹ ಅತಿಥಿ ಗಣ್ಯರನ್ನು ಮೇಲಂತಬೆಟ್ಟು ಗ್ರಾ.ಪಂ. ಮಾಜಿ ಸದಸ್ಯ ನಾರಾಯಣ ಪೂಜಾರಿ-ನಳಿನಾಕ್ಷಿ ದಂಪತಿ ಸ್ವಾಗತಿಸಿದರು ಸಂಸ್ಥೆಯ ಮಾಲಕರಾದ ರಾಘವೇಂದ್ರ ಮೇಲಂತಬೆಟ್ಟು, ಹರಿಪ್ರಸಾದ್ ಪಿಲ್ಯ- ಸೌಮ್ಯ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.