ಮಡಂತ್ಯಾರು ಸ್ಪಂದನ ಆಟೋ ಚಾಲಕರ ಸಂಘ ಮಡಂತ್ಯಾರು ವಲಯ ನೂತನ ಸಂಘದ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಡಂತ್ಯಾರು ಸ್ಪಂದನ ಆಟೋ ಚಾಲಕರ ಸಂಘ  ಮಡಂತ್ಯಾರು ವಲಯ ನೂತನ ಸಂಘದ ಉದ್ಘಾಟನೆಯನ್ನು ಮಡಂತ್ಯಾರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಪೂಜಾರಿ ಉದ್ಘಾಟಿಸಿ ನೂತನ ಸಂಘವು ಮಡಂತ್ಯಾರು ವಲಯದಲ್ಲಿ ಉತ್ತಮ ಸಂಘಟನೆಯಾಗಿ ಬೆಲೆಯಲ್ಲಿ ಮಡಂತ್ಯಾರು ಗ್ರಾಮ ಪಂಚಾಯತ್ ಸಂಘಕ್ಕೆ ಬೇಕಾದ ಸಹಕಾರ ನೀಡುವದಾಗಿ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಡಂತ್ಯಾರು ವರ್ತಕರ ಸಂಘದ ಅಧ್ಯಕ್ಷರಾದ ಜಯಂತ್ ಶೆಟ್ಟಿ ಮಾತನಾಡಿ ಈ ನೂತನ ಸಂಘವು ಸಮಾಜ ಸೇವೆಯಲ್ಲಿ ಹಾಗೂ ವಿವಿಧ ಕಾರ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಈ ಸಮಾಜದಲ್ಲಿ ಉತ್ತಮ ಸಂಘಟನೆ ಎಂಬ ಕೀರ್ತಿಯನ್ನು ಗಳಿಸಲಿ ಎಂದು ಹೇಳಿದರು ಮುಖ್ಯ ಅತಿಥಿ ಶ್ರೀಮತಿ ಸೌಮ್ಯ ಜಿ ಠಾಣಾಧಿಕಾರಿ ಆರಕ್ಷಕ ಠಾಣೆ ಪುಂಜಾಲಕಟ್ಟೆ ನಾರಾಯಣ ನಾವಡ ಬಳ್ಳಮಂಜ ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷರಾದ ರೂಪೇಶ್ ಆಚಾರ್ಯ ಪ್ರಾಸ್ತಾವಿಕ ನುಡಿಯನ್ನು ಸಂಘದ ನಿಯಮಗಳನ್ನು ಹಾಗೂ ಒಗ್ಗಟ್ಟಿನ ಬಗ್ಗೆ ತಿಳಿಸಿದರು. ಸಂಘದ ಗೌರವಾಧ್ಯಕ್ಷರಾದ ಉಮೇಶ್ ಕೋಟೆ, ಮಹಮ್ಮದ್ ಕೊಲ್ಪದಬೈಲು, ಗೌರವ ಸಲಹೆಗಾರರಾದ ರಂಜಿತ್ ಕುಮಾರ್ ನ್ಯಾಯವಾದಿಗಳು, ಮಂಗಳೂರು ಉಪಾಧ್ಯಕ್ಷರಾದ ದೇವದಾಸ ಹೆಗ್ಡೆ, ರಾಘವ ಸ್ವಾಮಿ, ಶ್ರೀಧರ ಆಚಾರ್ಯ , ಕಾರ್ಯದರ್ಶಿ ಹಮೀದ್ ಸಾಲುಮರ, ಜೊತೆ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ, ಕೋಶಾಧಿಕಾರಿ ಚಂದ್ರ ಮೂಲ್ಯ, ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು. ಸಂಘದ ಕಾಯದರ್ಶಿ ಹಮೀದ್ ಸಾಲ್ಮರ ಸ್ವಾಗತಿಸಿ, ಧನ್ಯವಾದ ಕೋರಿದರು, ಬಸೀರ್ ಕಾರ್ಯಕ್ರಮ ನಿರೂಪಿಸಿದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.